alex Certify
ಕನ್ನಡ ದುನಿಯಾ       Mobile App
       

Kannada Duniya

ಇರ್ಫಾನ್ ಖಾನ್ ಗೆ ಕಾಡ್ತಿರೋದು ಬ್ರೈನ್ ಕ್ಯಾನ್ಸರ್ ಅಲ್ಲ ಈ ಖಾಯಿಲೆ

ಬಾಲಿವುಡ್ ನಟ ಇರ್ಫಾನ್ ಖಾನ್ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ತಮ್ಮನ್ನು ಕಾಡ್ತಿರುವ ಖಾಯಿಲೆ ಯಾವುದು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಟ್ವಿಟ್ ಮಾಡಿದ್ದ ಇರ್ಫಾನ್ ಖಾನ್ ತಾನು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದೇನೆ ಎಂದಷ್ಟೇ ಟ್ವಿಟ್ ಮಾಡಿದ್ದರು. ಅವ್ರ ಟ್ವಿಟ್ ಬಾಲಿವುಡ್ ಸೇರಿದಂತೆ ಅಭಿಮಾನಿ ಬಳಗವನ್ನು ಆತಂಕಕ್ಕೆ ದೂಡಿತ್ತು. ಇರ್ಫಾನ್ ಖಾನ್ ರಿಗೆ ಬ್ರೈನ್ ಟ್ಯೂಮರ್ ಕಾಡ್ತಿದೆ ಎಂಬ ಸುದ್ದಿ ಕೂಡ ಹಬ್ಬಿತ್ತು. ಇರ್ಫಾನ್ ಖಾನ್ ಸ್ನೇಹಿತರು ಹಾಗೂ ಪತ್ನಿ ಇದನ್ನು ನಿರಾಕರಿಸಿದ್ದರು ಕೂಡ.

ಈಗ ಮತ್ತೆ ಸ್ವತಃ ಇರ್ಫಾನ್ ಖಾನ್ ಟ್ವಿಟ್ ಮಾಡಿದ್ದಾರೆ. ತಮ್ಮನ್ನು ಕಾಡ್ತಿರೋದು ಬ್ರೈನ್ ಟ್ಯೂಮರ್ ಅಲ್ಲ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಎಂದಿದ್ದಾರೆ. ನಾನು ಅಂದುಕೊಂಡಂತೆ ಅಥವಾ ಕನಸು ಕಂಡಂತೆ ನಮ್ಮ ಜೀವನ ಇರೋದಿಲ್ಲ. ಅಸಂಭವ ಸಂಗತಿಗಳ ಜೊತೆ ನಾವು ಮುಂದೆ ನಡೆಯಬೇಕಾಗುತ್ತದೆ. ನನಗೆ  ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಇದೆ ಎಂಬುದನ್ನು ಅರಗಿಸಿಕೊಳ್ಳಲಾಗ್ತಿಲ್ಲ. ಆದ್ರೆ ನನ್ನ ಸುತ್ತಮುತ್ತಲಿನವರ ಪ್ರೀತಿ, ವಿಶ್ವಾಸದ ಮೇಲೆ ನನಗೆ ವಿಶ್ವಾಸವಿದೆ. ನಾನು ಈ ಖಾಯಿಲೆಯಿಂದಾಗಿ ದೇಶದಿಂದ ದೂರವಿರಬೇಕಾಗಿದೆ. ನ್ಯೂರೋ ಎಂದರೆ ಮೆದುಳಿಗೆ ಸಂಬಂಧಿಸಿದ್ದಲ್ಲ. ಗೂಗಲ್ ನಲ್ಲಿ ಈ ಬಗ್ಗೆ ಸರ್ಚ್ ಮಾಡಬಹುದು. ನನ್ನ ಟ್ವಿಟ್ ಗೆ ಕಾಯುತ್ತಿರುವ ಎಲ್ಲರಿಗೂ ನಾನು ಮಾಹಿತಿ ನೀಡುತ್ತಲೇ ಇರುತ್ತೇನೆ ಎಂದು ಇರ್ಫಾನ್ ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...