alex Certify
ಕನ್ನಡ ದುನಿಯಾ       Mobile App
       

Kannada Duniya

ಈ ನಟನ ಫೋಟೋ ನೋಡಿ ಕಣ್ಣೀರಾಗಿದ್ದಾರೆ ಅಭಿಮಾನಿಗಳು

ಬಾಲಿವುಡ್ ನಟ ಇರ್ಫಾನ್ ಖಾನ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ತೂಕ ಇಳಿದಿದೆ. ಇರ್ಫಾನ್ ಹೊಸ ಫೋಟೋವನ್ನು ಅಭಿಮಾನಿಗಳಿಗಾಗಿ ಪೋಸ್ಟ್ ಮಾಡಿದ್ದಾರೆ.

ಇರ್ಫಾನ್ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ಇರ್ಫಾನ್ ತಮಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರವನ್ನು ಟ್ವಿಟ್ ಮಾಡಿದ್ದರು. ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸುತ್ತಮುತ್ತಲಿನ ಜನರು, ಅಭಿಮಾನಿಗಳ ಬೆಂಬಲ ಹೋರಾಡುವ ಶಕ್ತಿ ನೀಡಿದೆ ಎಂದಿದ್ದರು. ಚಿಕಿತ್ಸೆಯ ಬಗ್ಗೆ ಟ್ವೀಟರ್ ಮೂಲಕವೇ ಹೆಚ್ಚಿನ ಮಾಹಿತಿ ನೀಡ್ತೇನೆ ಎಂದಿದ್ದರು. ಅದ್ರಂತೆ ನಗ್ತಿರುವ ಫೋಟೋವೊಂದನ್ನು ಇರ್ಫಾನ್ ಉಡುಗೊರೆ ರೂಪದಲ್ಲಿ ನೀಡಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇರ್ಫಾನ್, ಮುಂಬೈಗೆ ಯಾವಾಗ ವಾಪಸ್ ಬರ್ತೇನೆಂಬುದು ಗೊತ್ತಿಲ್ಲ. ಹೋರಾಟವನ್ನು ಶೀಘ್ರ ಮುಗಿಸುವುದಿಲ್ಲ. ಸಂಪೂರ್ಣ ಗುಣಮುಖನಾದ ಮೇಲೆ ವಾಪಸ್ ಬರ್ತೇನೆ ಎಂದಿದ್ದರು. ಫೋಟೋ ಜೊತೆ ಆಸ್ಪತ್ರೆ ಚಿತ್ರಣವನ್ನೂ ಇರ್ಫಾನ್ ಟ್ವಿಟ್ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಬಾಲ್ಕನಿಯಿದೆ. ಅದ್ರಿಂದ ಹೊರ ಪ್ರಪಂಚ ನೋಡಬಹುದು. ಒಂದು ಕಡೆ ಆಸ್ಪತ್ರೆ, ಇನ್ನೊಂದು ಕಡೆ ಲಾರ್ಡ್ಸ್ ಕ್ರೀಡಾಂಗಣವಿದೆ. ನನ್ನ ವಾರ್ಡ್ ಮುಂದೆ ಕೋಮಾ ವಾರ್ಡ್ ಇದೆ ಎಂದು ಇರ್ಫಾನ್ ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...