alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಲ್ಲಿ ರಣವೀರ್ ಜೊತೆ ಪರಿಣಿತಿ ಕೂಡ ಮಾಡ್ತಿಲ್ಲ ಡಾನ್ಸ್

ಐಪಿಎಲ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಆವೃತ್ತಿ 11ರ ಉದ್ಘಾಟನೆ ಹಾಗೂ ಮೊದಲ ಪಂದ್ಯ ಇಂದು ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಬಾಲಿವುಡ್ ನ ದೊಡ್ಡ ಕಲಾವಿದರು ಐಪಿಎಲ್ ಉದ್ಘಾಟನೆ ವೇಳೆ ಕಾರ್ಯಕ್ರಮ ನೀಡೋದು ಮಾಮೂಲಿ. ಆದ್ರೆ ಈ ಬಾರಿಯ ಸಮಾರಂಭಕ್ಕೆ ಗ್ರಹಣ ಹಿಡಿದಿದೆ.

ರಣವೀರ್ ಸಿಂಗ್ ನಂತ್ರ ಪರಿಣಿತಿ ಚೋಪ್ರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾಳೆ. ಪರಿಣಿತಿ ಚೋಪ್ರಾ, ರಣವೀರ್ ಸಿಂಗ್, ವರುಣ್ ಧವನ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಪ್ರಭುದೇವ ಈ ಬಾರಿ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.

ಪರಿಣಿತಿ ಚೋಪ್ರಾ ‘ನಮಸ್ತೆ ಇಂಗ್ಲೆಂಡ್’ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಜೊತೆಗೆ ಅನೇಕ ಕರಾರುಗಳಿರುವ ಕಾರಣ ಪರಿಣಿತಿ ನೇರವಾಗಿ ಕಾರ್ಯಕ್ರಮ ನಿರ್ವಾಹಕರ ಜೊತೆ ಈ ಬಗ್ಗೆ ಮಾತನಾಡಿದ್ದಾಳೆ ಎನ್ನಲಾಗಿದೆ. ಪರಿಣಿತಿ ಪರಿಸ್ಥಿತಿ ಅರಿತ ನಿರ್ವಾಹಕರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ.

ಇನ್ನು ರಣವೀರ್ ಸಿಂಗ್ ಕೂಡ ಗಾಯದ ಕಾರಣ ಕಾರ್ಯಕ್ರಮ ನೀಡ್ತಿಲ್ಲ. ರಣವೀರ್ ಸಿಂಗ್ ಗೆ ಭರ್ಜರಿ ಸಂಬಳ ನೀಡಲು ನಿರ್ವಾಹಕರು ಮುಂದಾಗಿದ್ದರು. ಈ ವಿಷ್ಯ ಹಿಂದೆ ಸುದ್ದಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...