alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ ದಿನದಂದು ಕಠಿಣ ಆಸನ ಮಾಡಿ ವಿಡಿಯೋ ಹಾಕಿದ್ಲು ಬೆಡಗಿ

586366-shilpa-yoga-day

ಇಂದು ಇಡೀ ವಿಶ್ವವೇ ಯೋಗಾಯೋಗದಲ್ಲಿ ಮುಳುಗಿ ಹೋಗಿದೆ. ಪ್ರಧಾನ ಮಂತ್ರಿಯಿಂದ ಹಿಡಿದು ಬಾಲಿವುಡ್ ಸ್ಟಾರ್ ಗಳವರೆಗೆ ಎಲ್ಲರೂ ಯೋಗ ಮಾಡ್ತಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಗುಟ್ಟು ಯೋಗ. ಪ್ರತಿದಿನ ಯೋಗ ಮಾಡಿ ಸೌಂದರ್ಯದ ಜೊತೆಗೆ ಆರೋಗ್ಯ ಕಾಪಾಡಿಕೊಂಡಿದ್ದಾಳೆ ಶಿಲ್ಪಾ.

ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ ತನ್ನ ಅಭಿಮಾನಿಗಳಿಗಾಗಿ ಇನ್ಸ್ಟ್ರಾಗ್ರಾಮ್ ನಲ್ಲಿ ಯೋಗದ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾಳೆ. ವಿಡಿಯೋದಲ್ಲಿ ಶಿಲ್ಪಾ ಬಕಾಸನ ಮಾಡುವ ವಿಧಾನವನ್ನು ತನ್ನ ಅಭಿಮಾನಿಗಳಿಗೆ ತಿಳಿಸಿಕೊಟ್ಟಿದ್ದಾಳೆ.

ಅಂತರಾಷ್ಟ್ರೀಯ ಯೋಗ ದಿವಸದಂದು ಅಭಿಮಾನಿಗಳಿಗೆ ಶುಭಕೋರಿದ ಶಿಲ್ಪಾ, ಬಕಾಸನ ಮಾಡುವುದು ಕಷ್ಟ. ಈ ಆಸನ ಮಾಡಲು ಬಹಳ ಅಭ್ಯಾಸ ಬೇಕು ಎಂದಿದ್ದಾಳೆ. ಯೋಗದ ಜೊತೆಗೆ ಹಣ್ಣು-ತರಕಾರಿ ಸೇವನೆ ಮಾಡುವ ಶಿಲ್ಪಾ, ಖುಷಿಖುಷಿಯಾಗಿದ್ದರೆ ಸೌಂದರ್ಯ ಹೆಚ್ಚುತ್ತದೆ ಎಂದು ಅಭಿಮಾನಿಗಳಿಗೆ ಈ ಹಿಂದೆ ಟಿಪ್ಸ್ ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...