alex Certify
ಕನ್ನಡ ದುನಿಯಾ       Mobile App
       

Kannada Duniya

ಸಲ್ಮಾನ್ ಸಹೋದರಿ ಅರ್ಪಿತಾ ಕುರಿತು ನಿಮಗೆಷ್ಟು ಗೊತ್ತು?

salman khan-arpita

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್, ತಮ್ಮ ಕುಟುಂಬಕ್ಕೆ ಎಷ್ಟು ಮಹತ್ವ ನೀಡುತ್ತಾರೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಸಲ್ಮಾನ್ ಖಾನ್ ಗೆ ಸಹೋದರಿ ಅರ್ಪಿತಾ ಮೇಲೆ ಅಪಾರ ಅಕ್ಕರೆ. ಆದರೆ ಅರ್ಪಿತಾ ಖಾನ್, ಸಲ್ಮಾನ್ ಖಾನ್ ಒಡಹುಟ್ಟಿದ ಸಹೋದರಿಯಲ್ಲ ಎಂಬುದು ನಿಮಗೆ ಗೊತ್ತೇ..?

ಮುಂಬೈನ ಹಿಂದೂ ಧರ್ಮದ ಬಡ ಕುಟುಂಬದಲ್ಲಿ ಜನಿಸಿದ್ದ ಅರ್ಪಿತಾ, ಸಲ್ಮಾನ್ ಖಾನ್ ತಂಗಿಯಾಗಿದ್ದೇ ಒಂದು ಇಂಟರೆಸ್ಟಿಂಗ್ ಸ್ಟೋರಿ. ಸಲ್ಲು ತಂದೆ ಸಲೀಂ ಖಾನ್ ಗೆ ಇಬ್ಬರು ಪತ್ನಿಯರು. ಸಲ್ಮಾನ್, ಅರ್ಬಾಜ್ ಹಾಗೂ ಸೋಹೆಲ್ ಮತ್ತು ಅಲ್ವಿರಾ ಮೊದಲ ಪತ್ನಿಯ ಮಕ್ಕಳಾದರೆ ತಂದೆಯ ಮತ್ತೊಬ್ಬ ಪತ್ನಿ ಹೆಲೆನ್ ದತ್ತು ಪಡೆದ ಪುತ್ರಿಯೇ ಈ ಅರ್ಪಿತಾ ಖಾನ್.

ಮುಂಬೈನ ಬಡ ಹಿಂದೂ ಕುಟುಂಬದಲ್ಲಿ ಜನಿಸಿದ್ದ ಅರ್ಪಿತಾಳನ್ನು ಆಕೆ 1 ವರ್ಷದ ಮಗುವಾಗಿದ್ದಾಗಲೇ ಸಲೀಂ ಹಾಗೂ ಹೆಲೆನ್ ದಂಪತಿ ದತ್ತು ಪಡೆದಿದ್ದರು. ಅರ್ಪಿತಾ ಮನೆಗೆ ಕಾಲಿಟ್ಟ ಗಳಿಗೆಯಿಂದಲೇ ತಮ್ಮ ಅದೃಷ್ಟ ಖುಲಾಯಿಸಿದೆ ಎಂದು ಬಲವಾಗಿ ನಂಬಿರುವ ಸಲ್ಮಾನ್ ಕುಟುಂಬ, ಆಕೆಯನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತದೆ. ತಮ್ಮ ಒಡಹುಟ್ಟಿದ ಸಹೋದರಿ ಅಲ್ವಿರಾಗಿಂತ ಅರ್ಪಿತಾಳ ಮೇಲೆ ಸಲ್ಮಾನ್ ಸಹೋದರರು ಪ್ರಾಣವನ್ನೇ ಇರಿಸಿದ್ದಾರೆ.

ಅರ್ಪಿತಾ ಹಿಂದೂ ಕುಟುಂಬದಲ್ಲಿ ಜನಿಸಿರುವ ಕಾರಣ ಮನೆಯಲ್ಲಿ ಆಕೆ ಹಿಂದೂ ದೇವತೆಗಳನ್ನು ಪೂಜಿಸುವುದಕ್ಕೆ ಯಾರ ಅಡ್ಡಿಯೂ ಇಲ್ಲ. ಗಣಪತಿ ಹಬ್ಬದಂದು ತಮ್ಮ ಮನೆಯಲ್ಲೇ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸುವ ಸಲ್ಲು ಕುಟುಂಬ, ಪ್ರತಿ ವರ್ಷವೂ ಅದನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತದೆ. ದೆಹಲಿ ಮೂಲದ ಉದ್ಯಮಿ ಅಯುಷ್ ನೊಂದಿಗೆ ಹೈದರಾಬಾದಿನಲ್ಲಿ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಿದ್ದ ಅರ್ಪಿತಾ ಈಗ ಒಂದು ಮಗುವಿನ ತಾಯಿ. ಸಹೋದರಿಯ ಪತಿ ಆಯುಷ್ ರನ್ನು ಬಾಲಿವುಡ್ ನಾಯಕನನ್ನಾಗಿ ಮಾಡಲು ಸಲ್ಮಾನ್, ತಮ್ಮ ಹೋಂ ಬ್ಯಾನರ್ ನಲ್ಲಿ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...