alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದ ಮಗನನ್ನು ಇವರು ಹುಡುಕಿದ್ದೇಗೆ ಗೊತ್ತಾ?

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಎಲ್ಲಿ ತಮ್ಮಿಂದ ದೂರವಾಗಿಬಿಡ್ತಾರೋ ಅನ್ನೋ ಭಯ ಇದ್ದೇ ಇರುತ್ತೆ. ಮಕ್ಕಳನ್ನ ರಕ್ಷಿಸಿಕೊಳ್ಳೋದೇ ಪೋಷಕರ ಆದ್ಯ ಕರ್ತವ್ಯವಾಗಿರುತ್ತದೆ. ಇಲ್ಲೊಬ್ಬ ತಂದೆ ತನ್ನ ಮಗನನ್ನು ಕಾಪಾಡಿಕೊಳ್ಳೋದಕ್ಕೆ ಸ್ವಲ್ಪ ಫಿಲ್ಮೀ ಸ್ಟೈಲ್ನಲ್ಲಿ ಯೋಚಿಸಿದ್ದಾರೆ.

ನಿಮಗೆಲ್ಲಾ ಘಜನಿ ಸಿನಿಮಾದಲ್ಲಿ ಆಮೀರ್ ಖಾನ್ ಮಾಡಿದ ಪಾತ್ರ ನೆನಪಿರಬೇಕಲ್ವಾ. ಅದೇ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಪಾತ್ರ. ಈ ಸಿನಿಮಾದಲ್ಲಿ ಆಮೀರ್ ಖಾನ್ ಮಾಡಿದ ಪಾತ್ರದಿಂದ ಸ್ಫೂರ್ತಿ ಪಡೆದ ತಂದೆಯೊಬ್ಬರು ಮಗನಿಗಾಗಿ ಅಂತದ್ದೇ ಐಡಿಯಾ ಮಾಡಿದ್ದಾರೆ.

ಮುಂಬೈನ ಕುರ್ಲಾದಲ್ಲಿ ವಾಸವಿರುವಂತಾ ಶಿವಮಲಯಂ ಎಂಬ ವ್ಯಕ್ತಿ ಶಾರ್ಟ್ ಟರ್ಮ್ ಮೆಮೊರಿ ಲಾಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಕಲಿಯುತ್ತಿರುವ ಶಿವ ಮಲಯಮ್ ಇತ್ತೀಚೆಗಷ್ಟೆ ಶಾಲೆಯ ಬಸ್ ಮಿಸ್ ಮಾಡಿಕೊಂಡು ನಾಪತ್ತೆಯಾಗಿಬಿಟ್ಟಿದ್ದರು. ಆನಂತರದಲ್ಲಿ ಅವರು ಮುಂಬೈನ ರೈಲ್ವೆ ನಿಲ್ದಾಣವೊಂದರಲ್ಲಿ ಪತ್ತೆಯಾದರು. ಮಗನ ಮೊಬೈಲ್ ನಂಬರ್ ಗೆ ಕಾಲ್ ಮಾಡಿ ಆನಂತರದಲ್ಲಿ ಮಗ ಸುರಕ್ಷಿತವಾಗಿ ಮನೆಗೆ ತಲುಪುವಂತೆ ಮಾಡಿದ್ದರು ತಂದೆ ವೆಂಕನ .

ನೆನಪಿನ ಶಕ್ತಿ ಇಲ್ಲದ ಮಗನಿಗೆ ಅವರು ಕಾಲ್ ಮಾಡಿದ್ದು ಹೇಗೆ ಅನ್ನೋ ಅನುಮಾನ ನಿಮಗೆ ಬರಬಹುದು. ಅದಕ್ಕೆ ಕಾರಣ ಘಜನಿ ಸಿನಿಮಾ. ಐದಾರು ವರ್ಷಗಳ ಹಿಂದೆ ಅವರ ಸ್ನೇಹಿತನೊಬ್ಬ ಘಜನಿ ಸಿನಿಮಾ ನೋಡಿದ್ದರಂತೆ. ಅಲ್ಲಿ ಆಮೀರ್ ಖಾನ್ ಮೊಬೈಲ್ ನಂಬರ್ ಗಳನ್ನ ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡ ಹಾಗೆ ತಂದೆ ಕೂಡ ಮಗನ ಕೈ ಮೇಲೆ ತಮ್ಮ ಮೊಬೈಲ್ ನಂಬರ್ ಟ್ಯಾಟೂ ಹಾಕಿಸಿ ಅಂತ ಸಲಹೆ ನೀಡಿದ್ದಾರೆ.

ಆ ಪ್ರಕಾರ ತಂದೆ ಮಗನ ಕೈ ಮೇಲೆ ತಮ್ಮ ಮೊಬೈಲ್ ನಂಬರ್ ಟ್ಯಾಟೂ ಹಾಕಿಸಿದ್ದಾರೆ. ಅದರಿಂದಾಗಿಯೇ ಅವರು ತಮ್ಮ ಮಗ ಎಲ್ಲೇ ಹೋದರು ಸುರಕ್ಷಿತವಾಗಿ ವಾಪಸ್ಸು ಮನೆ ತಲುಪುವಂತೆ ನೋಡಿಕೊಳ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...