alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ದೇಶಕ ಎಎಂಆರ್ ರಮೇಶ್ ಗೆ ಇಂದ್ರಜಿತ್ ಲಂಕೇಶ್ ನೋಟಿಸ್

ಪತ್ರಕರ್ತೆ ಗೌರಿ ಲಂಕೇಶ್ ಸಹೋದರ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್, ತಮ್ಮ ವಕೀಲರ ಮೂಲಕ ನಿರ್ದೇಶಕ ಎ.ಎಂ.ಆರ್. ರಮೇಶ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೋಟಿಸ್ ಕಳುಹಿಸಿದ್ದಾರೆ. ತಮ್ಮ ಸಹೋದರಿ ಗೌರಿ ಲಂಕೇಶ್ ಹತ್ಯೆ ಬಗ್ಗೆ ಚಿತ್ರ ನಿರ್ಮಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ನೋಟಿಸ್ ರವಾನಿಸಿದ್ದಾರೆ.

ಗೌರಿ ಲಂಕೇಶ್ ಅವರ ಬದುಕು ಅಥವಾ ಹತ್ಯೆಯ ಕುರಿತಂತೆ ಸಿನೆಮಾ ಮಾಡಲು ರಮೇಶ್ ಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದ್ದಾರೆ. ನೈಜ ಚಿತ್ರಗಳಿಂದ್ಲೇ ಹೆಸರು ಮಾಡಿರುವ ರಮೇಶ್, ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿದ್ದರು.

ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಹಾಗೂ ಸಿಪಿಐ ಮುಖಂಡ ಗೋವಿಂದ್ ಪನಸರೆ ಹತ್ಯೆಯಲ್ಲಿ ಸಾಮ್ಯತೆ ಇದ್ದು, ಈ ಬಗ್ಗೆ ಚಿತ್ರ ನಿರ್ಮಿಸುವ ಬಗ್ಗೆ ಸುಳಿವು ನೀಡಿದ್ದರು. ಆದ್ರೆ ತಮ್ಮ ಚಿತ್ರ ಗೌರಿ ಹತ್ಯೆಯ ತನಿಖೆ ಬಗ್ಗೆ ಬೆಳಕು ಚೆಲ್ಲಲಿದೆ ಅಂತಾ ಹೇಳಿದ್ದರು. ರಾಜೀವ್ ಗಾಂಧಿ ಹತ್ಯೆ ಕುರಿತಂತೆ ರಮೇಶ್ ‘ಆಸ್ಫೋಟ’ ಎಂಬ ಚಿತ್ರ ನಿರ್ಮಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...