alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿರಾ ಗಾಂಧಿ ಪಾತ್ರದಲ್ಲಿ ಮಿಂಚಲಿದ್ದಾರೆ ವಿದ್ಯಾ ಬಾಲನ್

ನಟಿ ವಿದ್ಯಾಬಾಲನ್ ಅಭಿಮಾನಿಗಳೊಂದು ಒಳ್ಳೆ ಸುದ್ದಿ. ವಿದ್ಯಾ ಬಾಲನ್ ಅತ್ಯಂತ ಶಕ್ತಿಶಾಲಿ ಮಹಿಳೆ ಪಾತ್ರದಲ್ಲಿ ಮಿಂಚಲಿದ್ದಾಳೆ. ರಾಜಕೀಯದಲ್ಲಿ ಶಕ್ತಿಶಾಲಿ ಮಹಿಳೆ ಎನಿಸಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರಕ್ಕೆ ವಿದ್ಯಾ ಬಾಲನ್ ಜೀವ ತುಂಬಲಿದ್ದಾರೆ.

ವಿದ್ಯಾಬಾಲನ್ ಅಭಿನಯದ ಇಂದಿರಾ ಗಾಂಧಿ ಕಥೆ ವೆಬ್ ಸರಣಿಯಲ್ಲಿ ಪ್ರಸಾರವಾಗಲಿದೆ. 2017 ರಲ್ಲಿ ತುಮ್ಹಾರಿ ಸುಲು ಸಿನಿಮಾದಲ್ಲಿ ಮಿಂಚಿದ್ದ ವಿದ್ಯಾ ಬಾಲನ್, ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲು ಉತ್ಸುಕಳಾಗಿದ್ದಾಳೆ. ಭಾರತದ ಇತಿಹಾಸ ಹಾಗೂ ಭಾರತದ ರಾಜಕೀಯ ಕ್ಷೇತ್ರದಲ್ಲಿ ಶಕ್ತಿಶಾಲಿ ಹಾಗೂ ಪ್ರಭಾವಿ ಮಹಿಳೆಯಾಗಿದ್ದ ಇಂದಿರಾ ಗಾಂಧಿ ಪಾತ್ರ ನಿಭಾಯಿಸುವುದು ಅದೃಷ್ಟದ ವಿಚಾರ ಎನ್ನುತ್ತಾರೆ ವಿದ್ಯಾ.

ವೆಬ್ ಸರಣಿಯಲ್ಲಿ ಇಂದಿರಾ ಗಾಂಧಿ ಜೀವನ ಚರಿತ್ರೆ ಪ್ರಸಾರವಾಗಲಿದೆ. ವೈಯಕ್ತಿಕ ವಿಚಾರದಿಂದ ಹಿಡಿದು ರಾಜಕೀಯದವರೆಗೆ ಎಲ್ಲ ಕಥೆಯನ್ನು ವೆಬ್ ಸರಣಿ ಒಳಗೊಂಡಿರಲಿದೆ. ಪತ್ರಕರ್ತೆ ಸಾಗರಿಕಾ ಘೋಷ್ ಪುಸ್ತಕ ndira: India’s most powerful prime minister ಆಧಾರದ ಮೇಲೆ ಕಥೆ ನಿರ್ಧರಿತವಾಗಿದೆ.

ಶೀಘ್ರದಲ್ಲಿಯೇ ಶೂಟಿಂಗ್ ನಡೆಯಲಿದೆ. ವಿದ್ಯಾ ಬಾಲನ್ ಹೆಸರು ಅಂತಿಮವಾಗಿದೆ. ಆದ್ರೆ ಉಳಿದ ಪಾತ್ರಗಳ ಹುಡುಕಾಟ ನಡೆಯುತ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...