alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಈ ‘ರಿಯಾಲಿಟಿ ಷೋ’ ನಲ್ಲಿ ನಡೆದಿರುವ ಶಾಕಿಂಗ್ ಸಂಗತಿ

ಟಿವಿ ವಾಹಿನಿಗಳ ಪೈಕಿ ಅತಿ ಹಳೆಯ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ ಬಗ್ಗೆ ಗಂಭೀರ ಆರೋಪ ಕೇಳಿಬಂದಿದ್ದು, ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅಂಶ ಗೋಚರವಾಗಿದೆ.

ಟಿವಿ ವಾಹಿನಿಯನ್ನು ವೀಕ್ಷಿಸುವ ಪ್ರೇಕ್ಷಕರಿಗೆ ರಿಯಾಲಿಟಿ ಶೋ ಖುಷಿ ಕೊಡಬಹುದುಮ, ಆದರೆ ಇದರ ಹಿಂದಿನ ನೋವಿನ ಕತೆಗಳು ಸಾಕಷ್ಟು. ಇದೀಗ ಇಂಡಿಯಲ್ ಐಡಲ್ ನಲ್ಲಿ ನಡೆದ ಕೆಲವು ಘಟನೆಗಳನ್ನು ಮಾಜಿ ಸ್ಪರ್ಧಿಯೊಬ್ಬ ಹೊರಹಾಕಿದ್ದು, ಅವರ ಮಾತಿಗೆ ಬೆಂಬಲವೂ ವ್ಯಕ್ತವಾಗಿದೆ.

ಇಂಡಿಯಲ್ ಐಡಲ್ ನಲ್ಲಿ ದೈಹಿಕ ಕಿರುಕುಳ ನಡೆದಿದೆ ಎಂದು ಮಾಜಿ ಸ್ಪರ್ಧಿಯೊಬ್ಬರು ಮಾಡಿದ ಆರೋಪಕ್ಕೆ ಪುಷ್ಟಿ ನೀಡುವಂತೆ ಕಾರ್ಯಕ್ರಮ ನಿರೂಪಕರಾಗಿದ್ದ ಮಿನಿ ಮಾತೂರ್ ಸಹ ಆರೋಪವನ್ನು ಸಮರ್ಥಿಸಿದ್ದಾರೆ. ಆದರೆ, ತಾವು ಸ್ಪರ್ಧಿ ಆರೋಪಿಸಿದ ವರ್ಷದಲ್ಲಿ ನಿರೂಪಕಿಯಾಗಿರಲಿಲ್ಲವಾದರೂ ರಿಯಾಲಿಟಿ ಶೋಗಳಲ್ಲಿ ಇಂತದ್ದು ನಡೆಯುತ್ತದೆ ಎಂಬರ್ಥ ಬರುವ ರೀತಿಯಲ್ಲಿ ಅಭಿಪ್ರಾಯ ನೀಡಿದ್ದಾರೆ.

ನಿಶಾಂತ್ ಕೌಶಿಕ್ ಎಂಬ ಸ್ಪರ್ಧಿ ಟ್ವೀಟರ್ ಮೂಲಕ ತಮಗಾದ ಅನುಭವ ಹಂಚಿಕೊಂಡಿದ್ದರು. ಸ್ಪರ್ಧಿಗಳು ಹಲವು ಗಂಟೆ ಸರದಿಯಲ್ಲಿ ಕಾಯಬೇಕು. ಊಟ, ತಿಂಡಿ, ನೀರು ಇಲ್ಲದೇ, ಶೌಚಾಲಯಕ್ಕೂ ಹೋಗದ ಸ್ಥಿತಿ ಇತ್ತು. ಒಮ್ಮೆ ಕ್ಯೂನಿಂದ ಹೊರ ಬಂದರೆ ಮತ್ತೆ ಸೇರಿಕೊಳ್ಳುವುದೇ ಅಸಾಧ್ಯವಾಗಿತ್ತು. ಇದು ಒಂದು ರೀತಿಯ ದೈಹಿಕ ಕಿರುಕುಳ ಎಂದು ಅಭಿಪ್ರಾಯಪಟ್ಟಿದ್ದರು.

ಈ ಸ್ಪರ್ಧಿಯ ಟ್ವೀಟ್ ಟಿವಿ ಲೋಕದಲ್ಲಿ ಸಾಕಷ್ಟು ಸದ್ದು ಮಾಡಿದೆ. 2004 ರಿಂದ 2007 ರವರೆಗೆ ಮತ್ತು 2012 ರಲ್ಲಿ ನಿರೂಪಕಿಯಾಗಿದ್ದ ಮಿನಿ ಮಾಥೂರ್ ಇಂಡಿಯನ್ ಐಡಲ್ ಕಾರ್ಯಕ್ರಮ ನಿರೂಪಕರಾಗಿದ್ದು, ಆಕೆ ಸಹ ಹೀಗೆ ನಡೆದಿರಬಹುದೆಂದು ಟ್ವೀಟರ್ ನಲ್ಲಿ ಅಭಿಪ್ರಾಯಪಟ್ಟಿರುವುದು ಚರ್ಚೆ ಬೆಳೆಯಲು ಕಾರಣವಾಗಿದೆ.

ಕಾರ್ಯಕ್ರಮದ ಕ್ರ್ಯೂ ಸದಸ್ಯರು ಒತ್ತಡ ತರುವ ಚಟುವಟಿಕೆಗಳ ಬಗ್ಗೆ ಹೇಳಿರುವ ನಿಶಾಂತ್, ಒಬ್ಬ ಸ್ಪರ್ಧಿಗೆ ಕ್ರ್ಯೂ ಸದಸ್ಯರು ಪೆಟ್ಟು ಕೊಟ್ಟಿದ್ದರ ಬಗ್ಗೆಯೂ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ. ಸ್ಪರ್ಧಿಯೊಬ್ಬರ ಹರಿದ ಚಪ್ಪಲಿಯ ಬಗ್ಗೆ ಜಡ್ಜ್ ಗಳು ಅಪಮಾನಿಸಿದ್ದನ್ನೂ ಅವರು ನೆನಪಿಸಿಕೊಂಡಿದ್ದಾರೆ.

ಇಂಡಿಯಲ್ ಐಡಲ್ ಹತ್ತು ಅಥವಾ ಅದಕ್ಕಿಂತ ಹೆಚ್ಚು ಯೋಗ್ಯ ಸ್ಪರ್ಧಿಗಳನ್ನು ಹೆಕ್ಕುತ್ತದೆ. ಅದಕ್ಕಾಗಿ ಲಕ್ಷಾಂತರ ಸ್ಪರ್ಧಿಗಳನ್ನು ಅವಮಾನಿಸುತ್ತದೆ. ಇದು ಹಾಸ್ಯಾಸ್ಪದ ಮತ್ತು ಜನರ ಭಾವನೆ ದುರುಪಯೋಗಪಡಿಸಿಕೊಳ್ಳುವ ಕೆಲಸ ಎಂದೂ ಸಹ ವಿಶ್ಲೇಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...