alex Certify
ಕನ್ನಡ ದುನಿಯಾ       Mobile App
       

Kannada Duniya

ದಿಗಂತ್ ಜತೆಗಿನ “ವಿವಾಹ” ದ ಸುದ್ದಿಯನ್ನು ಕೂಗಿ ಕೂಗಿ ಹೇಳಿದ ಐಂದ್ರಿತಾ

ಬಹು ಕಾಲದಿಂದ ಜೋಡಿ ಹಕ್ಕಿಗಳಂತೆ ವಿಹರಿಸುತ್ತಿದ್ದ ಸ್ಯಾಂಡಲ್ ವುಡ್ ನಟ-ನಟಿಯರಾದ ದಿಗಂತ್ ಹಾಗೂ ಐಂದ್ರಿತಾ ರೇ ಡಿಸೆಂಬರ್ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮಲೆನಾಡ ಹುಡುಗ ದಿಗಂತ್ ಹಾಗೂ ಬೆಂಗಾಳಿ ಬೆಡಗಿ ಐಂದ್ರಿತಾ ರೇ, ಮಲೆನಾಡು ಹಾಗೂ ಬಂಗಾಳದ ಎರಡೂ ಸಂಪ್ರದಾಯಗಳಂತೆ ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದು, ಇದಕ್ಕೆ ಈಗಾಗಲೇ ಕುಟುಂಬಸ್ಥರಿಂದ ಸಕಲ ಸಿದ್ಧತೆಗಳು ನಡೆದಿವೆ.

ದಿಗಂತ್ ಜತೆಗಿನ ವಿವಾಹ ವದಂತಿ ಕುರಿತು ಪದೇ ಪದೇ ಕೇಳಿ ಬರುತ್ತಿದ್ದ ವದಂತಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಐಂದ್ರಿತಾ ರೇ, ಅಂತಹ ಸಂದರ್ಭ ಬಂದಾಗ ಘಂಟಾಘೋಷವಾಗಿ ಕೂಗಿ ಈ ವಿಷಯವನ್ನು ಘೋಷಿಸುತ್ತೇನೆಂದು ಹೇಳಿದ್ದರು.

ಅದರಂತೆ ಮಾತಿಗೆ ತಪ್ಪದ ಅವರು ಗೋವಾದಲ್ಲಿ ನಡೆಯುತ್ತಿರುವ ತಮ್ಮ ‘ಗರುಡ’ ಚಿತ್ರದ ಶೂಟಿಂಗ್ ವೇಳೆ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಹಿರಿಯ ನಟ ರಂಗಾಯಣ ರಘು ಸೇರಿದಂತೆ ಇಡೀ ಚಿತ್ರತಂಡ ಐಂದ್ರಿತಾ ರೇ ಅವರಿಗೆ ಶುಭಾಶಯ ಹೇಳಿದೆ.

This is how @aindrita_ray announced it #loud 📢 and clear to the world her #wedding with @diganthmanchale which is scheduled on December 11 & 12.

Posted by S M Shashi Prasad on Wednesday, November 21, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...