alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ಇಲಿಯಾನಾರೊಂದಿಗೆ ಅನುಚಿತ ವರ್ತನೆ

ileana-nati

ಬಹುಭಾಷಾ ನಟಿ ಇಲಿಯಾನಾ ಡಿ ಕ್ರೂಜ್ ಕಾಮುಕರ ಕಾಟಕ್ಕೆ ನಲುಗಿ ಹೋಗಿದ್ದಾರೆ. 6 ಮಂದಿ ಕಾಮುಕರು ಅವರಿಗೆ ಕಾಟ ಕೊಟ್ಟಿದ್ದು, ಇದನ್ನು ಇಲಿಯಾನಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಫ್ಯಾಷನ್ ಶೋನಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಹೋಗುವಾಗ ಸಿಗ್ನಲ್ ನಲ್ಲಿ ಕಾರ್ ನಿಂತಿದೆ. ಆಗ 6 ಮಂದಿ ಕಾಮುಕರು ಕಾರಿನ ಬಳಿ ಬಂದು ಕೀಟಲೆ ಮಾಡಿದ್ದಾರೆ.

ಕಾರಿನಲ್ಲಿರುವುದು ಇಲಿಯಾನಾ ಎಂಬುದು ಗೊತ್ತಾದ ಕೂಡಲೇ ಅತಿರೇಕದ ವರ್ತನೆ ತೋರಿದ್ದಾರೆ. ಅವರಿಗೆ ಪ್ರತಿರೋಧ ತೋರಿದರೆ, ಸಮಸ್ಯೆಯಾಗಬಹುದು ಎಂದರಿತ ಇಲಿಯಾನಾ ಸುಮ್ಮನೆ ತೆರಳಿದ್ದಾರೆ.

ಇದನ್ನು ಹಂಚಿಕೊಂಡಿರುವ ಅವರು, ನಾವು ಸಾಮಾಜಿಕ ಜೀವನದಲ್ಲಿದ್ದೇವೆ. ಎಲ್ಲರಂತೆಯೇ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಅಷ್ಟು ಮಾತ್ರಕ್ಕೆ ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಅಭಿಮಾನದ ಹೆಸರಲ್ಲಿ ಅತಿರೇಕದಿಂದ ವರ್ತಿಸುವುದು ಸರಿಯಲ್ಲ. 6 ಮಂದಿ ಅಭಿಮಾನಿಗಳ ಹೆಸರಲ್ಲಿ ಪುಂಡಾಟಿಕೆ ತೋರಿದರು. ನಾನು ಅಲ್ಲಿಯೇ ಅವರಿಗೆ ತರಾಟೆಗೆ ತೆಗೆದುಕೊಳ್ಳಬೇಕೆಂದುಕೊಂಡಿದ್ದೆ. ನಮ್ಮ ಕಾರಿನ ಚಾಲಕರೊಬ್ಬರೇ ಇದ್ದರು. ಹಾಗಾಗಿ ಸುಮ್ಮನಾದೆ. ಅಭಿಮಾನದ ಹೆಸರಲ್ಲಿ ಇಂತಹ ವರ್ತನೆಗಳು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...