alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೋಲ್ ಪ್ರಿಯರನ್ನು ತರಾಟೆಗೆ ತೆಗೆದುಕೊಂಡ ನಟಿ

ಇಲಿಯಾನಾ ಡಿ ಕ್ರೂಝ್ ಅಭಿನಯದ ‘ಬಾದ್ ಶಾಹೋ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ. ಆದ್ರೆ ಇಲಿಯಾನಾಗೆ ಪೋಲಿಗಳ ಕಾಟ ಹೆಚ್ಚಾಗಿದೆ. ಕಾರಿನಲ್ಲಿ ಒಂಟಿಯಾಗಿ ಹೋಗ್ತಿದ್ದ ನಟಿಯನ್ನು, 6 ಜನರು ಹಿಂಬಾಲಿಸಿ ಬಂದಿದ್ದರಂತೆ. ಈ ವಿಚಾರವನ್ನು ಖುದ್ದು ಇಲಿಯಾನಾ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.

ಬಾದ್ ಶಾಹೋ ಚಿತ್ರದ ಪ್ರಮೋಷನ್ ಗೆ ಹೋದಾಗ್ಲೂ ಎಲ್ರೂ ಇಲಿಯಾನಾಳ ಆಸ್ಟ್ರೇಲಿಯನ್ ಗೆಳೆಯ ಆ್ಯಂಡ್ರೂ ನೀಬೂನ್ ಬಗ್ಗೆ ಕೇಳ್ತಾ ಇದ್ರು. ಇದ್ರಿಂದ ನಟಿ ಸಹಜವಾಗಿಯೇ ಕೋಪಗೊಂಡಿದ್ದಾಳೆ. ನಾನು ಪಬ್ಲಿಕ್ ಫಿಗರ್ ಅನ್ನೋದು ನಿಜ, ಆದ್ರೆ ಪಬ್ಲಿಕ್ ಪ್ರಾಪರ್ಟಿ ಅಲ್ಲ ಅಂತಾ ತಿರುಗೇಟು ಕೊಟ್ಟಿದ್ದಾಳೆ.

ಯಾವುದು ಸರಿ ಯಾವುದು ತಪ್ಪು ಅನ್ನೋದನ್ನು ಹೇಳುವ ಅಧಿಕಾರ ಯಾರಿಗೂ ಇಲ್ಲ. ಹೀಗೆ ಹಿಂಬಾಲಿಸಿ ಬರುವ ಪುಂಡರು ಅವರ ತಾಯಿ ಮತ್ತು ಸಹೋದರಿಯನ್ನು ಇದೇ ರೀತಿ ನೋಡ್ತಾರಾ? ನಾನೂ ಒಬ್ಬ ಹೆಣ್ಣು, ನನ್ನನ್ಯಾಕೆ ಗೌರವಿಸುತ್ತಿಲ್ಲ ಅಂತಾ ಇಲಿಯಾನಾ ಖಾರವಾಗಿ ಪ್ರಶ್ನಿಸಿದ್ದಾಳೆ.

ಆ್ಯಂಡ್ರೂ ಜೊತೆಗಿನ ಇಲಿಯಾನಾ ಗೆಳೆತನದ ಬಗ್ಗೆ ರೇಸಿಸ್ಟ್ ಕಮೆಂಟ್ ಮಾಡಿದವರಿಗೂ ಬಿಸಿ ಮುಟ್ಟಿಸಿದ್ದಾಳೆ. ಆ್ಯಂಡ್ರೂ ಬೆಳ್ಳಗಿದ್ದಾನೆ ಅನ್ನೋ ಕಾರಣಕ್ಕೆ ಇಲಿಯಾನಾ ಆತನ ಜೊತೆ ಸಂಬಂಧ ಹೊಂದಿದ್ದಾಳೆ ಅಂತಾ ಟ್ರೋಲ್ ಮಾಡ್ತಿರೋದು ನಟಿಯ ಕೋಪಕ್ಕೆ ಕಾರಣವಾಗಿದೆ.

Hey Bombay times. Here is a more recent photo @ileana_official and myself 🙂 Enjoy!

A post shared by Andrew Kneebone Photography (@andrewkneebonephotography) on

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...