alex Certify
ಕನ್ನಡ ದುನಿಯಾ       Mobile App
       

Kannada Duniya

ಬಿರಿಯಾನಿಯನ್ನೂ ಬ್ಯಾನ್ ಮಾಡಿ ಎಂದ ಖ್ಯಾತ ನಟ

jalli

ಚೆನ್ನೈ: ಹೋರಿ ಬೆದರಿಸುವ ‘ಜಲ್ಲಿಕಟ್ಟು’ ನಿಷೇಧಿಸುವುದಾದರೆ, ಬಿರಿಯಾನಿಯನ್ನೂ ಬ್ಯಾನ್ ಮಾಡಬೇಕೆಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನ ಸಂಸ್ಕೃತಿಯೊಂದಿಗೆ ಜಲ್ಲಿಕಟ್ಟು ಹಾಸು ಹೊಕ್ಕಾಗಿದೆ. ಈ ಕ್ರೀಡೆಯನ್ನು ನಿಷೇಧಿಸಿರುವುದು ಸರಿಯಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಜಲ್ಲಿಕಟ್ಟು ಕ್ರೀಡೆಯನ್ನು ಕ್ರೌರ್ಯ ಎಂದು ಭಾವಿಸಿ ನಿಷೇಧ ಹೇರಿದಂತೆ, ಬಿರಿಯಾನಿ ತಿನ್ನುವುದನ್ನೂ ಕೂಡ ನಿಲ್ಲಿಸಬೇಕೆಂದು ಖಾರವಾಗಿ ಹೇಳಿದ್ದಾರೆ.

ನಾನು ಜಲ್ಲಿಕಟ್ಟು ಕ್ರೀಡೆಯಲ್ಲಿ ಹಲವಾರು ಸಲ ಭಾಗಿಯಾಗಿದ್ದೇನೆ. ಅದರಲ್ಲಿ ಗೂಳಿಗಳಿಗೆ ಹಿಂಸೆ ಮಾಡುವುದಿಲ್ಲ. ತಮಿಳುನಾಡು ಸಂಸ್ಕೃತಿಯ ಭಾಗವಾದ ಜಲ್ಲಿಕಟ್ಟು ನಿಷೇಧಿಸುವುದಾದರೆ, ಬಿರಿಯಾನಿಯನ್ನೂ ಕೂಡ ಸೇರಿಸಬೇಕೆಂದು ತಿಳಿಸಿದ್ದಾರೆ.

ಸ್ಪೇನ್ ನಲ್ಲಿ ನಡೆಯುವ ಗೂಳಿ ಕಾಳಗಕ್ಕೂ, ಜಲ್ಲಿಕಟ್ಟು ಕ್ರೀಡೆಗೂ ವ್ಯತ್ಯಾಸವಿದೆ. ಅಲ್ಲಿ ಗೂಳಿಯನ್ನು ಹಿಂಸಿಸಲಾಗುತ್ತದೆ. ನಮ್ಮಲ್ಲಿ ಹಿಂಸೆ ಮಾಡಲ್ಲ, ಅವುಗಳನ್ನು ಪಳಗಿಸಲಾಗುತ್ತದೆ. ಗೂಳಿಗಳನ್ನು ದೇವರೆಂದು ಭಾವಿಸಲಾಗುತ್ತದೆ ಎಂದು ಹೇಳಿದ್ದಾರೆ.

2014 ರಲ್ಲಿ ಸುಪ್ರೀಂ ಕೋರ್ಟ್ ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಿದ್ದು, ಅದಾದ ಬಳಿಕ ಕಮಲ್ ಹಾಸನ್ ಹಲವು ಬಾರಿ ಈ ಕ್ರೀಡೆಯ ಪರವಾಗಿ ಮಾತನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...