alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬಾಲಿವುಡ್ ನಟನ ಫೇಸ್ಬುಕ್ ಪೋಸ್ಟ್

randeep-hooda-mobile-numbe

ಬಾಲಿವುಡ್ ನಟ ರಣದೀಪ್ ಹೂಡಾ ಫೇಸ್ಬುಕ್ ನಲ್ಲಿ ಇಂಟ್ರೆಸ್ಟಿಂಗ್ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿವಿಧ ಧರ್ಮದ ಜನರಿಗೆ ಸಾಮಾಜಿಕ ತಾಣಗಳಿಂದ ದೂರವಿರುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲ ಧಾರ್ಮಿಕ ವಿಷಯಗಳ ಬಗೆಗಿನ ಸುದ್ದಿ ಅಥವಾ ಚರ್ಚೆಯನ್ನು ವೀಕ್ಷಿಸಬೇಡಿ ಅಂತಾ ಹೇಳಿದ್ದಾರೆ.

ಜಗತ್ತಿನ ಅತ್ಯಂತ ಶ್ರೇಷ್ಠ ದೇಶವಾದ ಭಾರತದಲ್ಲಿ ವಾಸಿಸುತ್ತಿದ್ದೇವೆ ಎಂಬುದನ್ನು ಫೇಸ್ಬುಕ್ ಬಳಕೆದಾರರು ಅರ್ಥಮಾಡಿಕೊಳ್ಳಬೇಕು ಅನ್ನೋದು ರಣದೀಪ್ ಹೂಡಾರ ಅಭಿಪ್ರಾಯ.

‘ನೀವೊಮ್ಮ ಮುಸ್ಲಿಂ ಆಗಿದ್ದು, ಸಾವಿರಾರು ವರ್ಷಗಳಿಂದ ಬದುಕುತ್ತಿರುವ ದೇಶ ದಿಢೀರನೆ ನಿಮಗೆ ಅಸುರಕ್ಷಿತ ಎನಿಸಿದ್ರೆ, ನೀವೊಬ್ಬ ದಲಿತರಾಗಿದ್ದು ಪ್ರತಿಕ್ಷಣವೂ ಸಮಾಜದಲ್ಲಿ ಅವಮಾನವಾಗುತ್ತಿದೆ ಎನಿಸಿದ್ರೆ, ನೀವೊಬ್ಬ ಹಿಂದು ಆಗಿದ್ದು, ಗೋಹತ್ಯೆ ನಡೆಯುತ್ತಿದೆ ಎಂಬ ಭಾವನೆ ಮೂಡಿದ್ರೆ, ನೀವೊಬ್ಬ ಜೈನರಾಗಿದ್ದು ಧಾರ್ಮಿಕತೆಗೆ ಧಕ್ಕೆ ಬರುತ್ತಿದೆ ಎಂದೆನಿಸಿದ್ರೆ, ನೀವೊಬ್ಬ ಪಂಜಾಬಿಯಾಗಿದ್ದು ಯುವಕರೆಲ್ಲ ಡ್ರಗ್ಸ್ ದಾಸರಾಗ್ತಿದ್ದಾರೆ ಎನಿಸಿದ್ರೆ ಸಾಮಾಜಿಕ ತಾಣದಿಂದ ದೂರವಿರಿ. ನ್ಯೂಸ್ ನೋಡಬೇಡಿ. ಧಾರ್ಮಿಕ ವಿಷಯದ ಬಗೆಗಿನ ಚರ್ಚೆಯನ್ನು ನೋಡಬೇಡಿ’ ಅಂತಾ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.

ರಣದೀಪ್ ಹೂಡಾ ಮಾಡಿರುವ ಫೇಸ್ಬುಕ್ ಪೋಸ್ಟ್ ವೈರಲ್ ಆಗಿದೆ. ಈಗಾಗ್ಲೇ 16,000 ಜನರು ಈ ಫೋಸ್ಟ್ ಅನ್ನು ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...