alex Certify
ಕನ್ನಡ ದುನಿಯಾ       Mobile App
       

Kannada Duniya

ರ್ಯಾಪರ್ ಚಂದನ್ ಶೆಟ್ಟಿ ಮುಂದಿಟ್ಟಿದ್ದಾರೆ ಈ ಪ್ರಶ್ನೆ

ಗಾಂಜಾ ಕುರಿತ ಹಾಡಿನಿಂದ ವಿವಾದಕ್ಕೊಳಗಾಗಿರುವ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ ಪೊಲೀಸರ ಕ್ರಮಕ್ಕೆ ಅಸಹನೆ ವ್ಯಕ್ತಪಡಿಸಿದ್ದಾರೆ.

ಸಿಸಿಬಿ ಮುಂದೆ ಹಾಜರಾಗುವ ಮುನ್ನ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕನ್ನಡ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ನನ್ನ ಹಾಡು ಇನ್ನು ಬಿಡುಗಡೆಯಾಗದ ಅಂತ್ಯ ಚಿತ್ರದ್ದು. ಅದನ್ನು ಮನರಂಜನೆಗಾಗಿ ಮಾಡಲಾಗಿದೆಯೇ ಹೊರತು ಅದನ್ನು ಬಳಸಿ ಎಂದಲ್ಲ ಎಂದು ಹೇಳಿದ್ದಾರೆ.

ಸಿಸಿಬಿ ನೋಟಿಸ್ ಗೆ ಪ್ರತಿಕ್ರಿಯೆ ನೀಡಲು ಚಂದನ್ ಶೆಟ್ಟಿಯವರು ಸಿಸಿಬಿ ಎಸಿಪಿ ಮೋಹನ್ ಕುಮಾರ್ ಅವರ ಮುಂದೆ ಹಾಜರಾಗಿದ್ದಾರೆ. ಮೂರು ವರ್ಷಗಳ ಹಿಂದೆ ಗಾಂಜಾ ಗೀತೆಯನ್ನು ಹಾಡಿದ್ದಾಗಿ ತಿಳಿಸಿದ ಅವರು, ವಿವಿಧ ಕಾರಣಕ್ಕೆ ಚಿತ್ರ ಬಿಡುಗಡೆಯಾಗಿಲ್ಲ. ಆದರೆ ಹಾಡು ಮಾತ್ರ ಲೀಕ್ ಆಯಿತು. ಹೀಗಾಗಿ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡುವುದು ನಿರ್ದೇಶಕರಿಗೆ ಅನಿವಾರ್ಯವಾಯಿತು ಎಂದಿದ್ದಾರೆ.

ಬಳಿಕ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಪೊಲೀಸ್ ನೋಟಿಸ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಚಂದನ್ ಶೆಟ್ಟಿ, ನಾನು ಹಾಡಿದ ಹಾಡು ಗಾಂಜಾ ಬಳಕೆಯನ್ನು ಪ್ರೇರೇಪಿಸಲಿದೆ ಎಂದಾದರೆ, ಪರದೆ ಮೇಲೆ ಬರುವ ಹತ್ಯೆ, ಕಳ್ಳತನ, ಅತ್ಯಾಚಾರ ಸೀನ್ ಗಳೂ ಜನರ ಮೇಲೆ ಪ್ರಭಾವ ಬೀರಬಹುದು. ಈ ಚಿತ್ರದಲ್ಲಿ ಕೂಡ ಮನರಂಜನೆ ಉದ್ದೇಶದಿಂದ ಆ ಪದ ಬಳಸಲಾಗಿದೆ ಹೊರತು ಜನರನ್ನು ಬಳಸುವಂತೆ ಪ್ರೋತ್ಸಾಹಿಸಲು ಅಲ್ಲ ಎಂದರು.

ಚಿತ್ರದ ನಿರ್ದೇಶಕರು ಸ್ಕ್ರಿಪ್ಟ್ ನೊಂದಿಗೆ ಹಾಜರಾಗಿ ಹಾಡಲು ಕೋರಿದರು. ಈ ಹಾಡು ಯುವಕರಿಗೆ ಮಾದಕ ವಸ್ತು ಬಗ್ಗೆ ಜಾಗೃತಿ ಸಂದೇಶ ಇದೆ ಎಂದು ತಿಳಿಸಿದರು. ನಾನು 5 ಸಾವಿರ ಪಡೆದು ಈ ಹಾಡು ಹಾಡಿದೆ ಎಂದು ಹೇಳಿದ್ದಾರೆ. ಮೂರು ಶತಮಾನಗಳ ಹಿಂದೆ ಶಿಶುನಾಳ ಷರೀಫರು ಗಾಂಜಾ ಬಗ್ಗೆ ಬರೆದಿದ್ದಾರೆ. ಆ ಹಾಡು ಇಂದಿಗೂ ಪ್ರಖ್ಯಾತಿ ಹೊಂದಿದೆ. ಅದರ ಬಗ್ಗೆ ಯಾರದ್ದೂ ಆಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೆ ಸಹ ಧಮ್ ಮಾರೋ ಧಮ್ ಹಾಡಿಗೆ ಸಿಸಿಬಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಂಬೋ-2 ಚಿತ್ರಕ್ಕೆ ಅವರು ರಾಗ ಸಂಯೋಜನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...