alex Certify
ಕನ್ನಡ ದುನಿಯಾ       Mobile App
       

Kannada Duniya

‘ಬ್ರಹ್ಮೋತ್ಸವಂ’ ಸೋಲಿನ ಹೊಣೆ ಹೊತ್ತ ಮಹೇಶ್ ಬಾಬು

mahesh-babu_34568ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟ ತಲುಪದೆ ವಿಫಲಗೊಂಡಿದೆ. ಚಿತ್ರ ವಿಫಲಗೊಳ್ಳಲು ನಿರ್ದೇಶಕ ಶ್ರೀಕಾಂತ್ ಅಡ್ಡಾಲ ಅವರೇ ಕಾರಣವೆಂದು ಹೇಳಲಾಗುತ್ತಿರುವ ಮಧ್ಯೆ ನಾಯಕ ನಟ ಮಹೇಶ್ ಬಾಬು ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ನಿರ್ದೇಶಕರನ್ನು ಹೊಣೆ ಮಾಡುವುದು ಸಲ್ಲದು. ನನ್ನ ಚಿತ್ರಕ್ಕೆ ನಿರ್ದೇಶಕರನ್ನು ನಾನೇ ಆಯ್ಕೆ ಮಾಡಿಕೊಂಡಿದ್ದೇನೆ. ಹಾಗಾಗಿ ‘ಬ್ರಹ್ಮೋತ್ಸವಂ’ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ತಿಳಿಸಿದ್ದಾರೆ. ಯಾವುದೇ ಒಂದು ಚಿತ್ರ ವಿಫಲವಾಗಲು ಆನೇಕ ಕಾರಣಗಳಿರುತ್ತವೆ ಎಂದೂ ಅವರು ಹೇಳಿದ್ದಾರೆ.

ಮಹೇಶ್ ಬಾಬು, ಸಮಂತಾ ರುಥ್ ಪ್ರಭು, ಕಾಜಲ್ ಅಗರ್ವಾಲ್, ಪ್ರಣೀತಾ ಸುಭಾಷ್, ಸತ್ಯರಾಜ್, ರಾವ್ ರಮೇಶ್, ನರೇಶ್, ರೇವತಿ ಮತ್ತು ಸಯ್ಯಾಜಿ ಶಿಂಧೆಯವರಂತಹ ಘಟಾನುಘಟಿಗಳು ಅಭಿನಯಿಸಿದ್ದ ‘ಬ್ರಹ್ಮೋತ್ಸವಂ’ ಚಿತ್ರ ಆಪಾರ ನಿರೀಕ್ಷೆ ಹುಟ್ಟು ಹಾಕಿತ್ತಾದರೂ ನಿರೀಕ್ಷಿತ ಮಟ್ಟ ತಲುಪಲು ವಿಫಲವಾಗಿದೆ.

ಸದ್ಯ ಲಂಡನ್ ನಲ್ಲಿರುವ ಮಹೇಶ್ ಬಾಬು, ಭಾರತಕ್ಕೆ ಮರಳಿದ ಬಳಿಕ ಎ.ಆರ್. ಮುರುಗದಾಸ್ ನಿರ್ಮಾಣದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಚಿತ್ರ ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...