alex Certify
ಕನ್ನಡ ದುನಿಯಾ       Mobile App
       

Kannada Duniya

ಸುಶ್ಮಿತಾ ಸೇನ್ ಜೊತೆಗಿನ ಸಂಬಂಧದ ಕುರಿತು ವಿಕ್ರಮ್ ಭಟ್ ಹೇಳಿದ್ದೇನು?

never-wanted-to-marry-sushmita-or-ameesha-says-vikram-bhattಬಾಲಿವುಡ್ ನಲ್ಲಿ ಲಿವ್ ಇನ್ ರಿಲೇಶನ್ ಶಿಪ್ ಈಗ ಸಾಮಾನ್ಯ ವಿಚಾರ ಎಂಬಂತಾಗಿದೆ. ಆದರೆ 10 ವರ್ಷಗಳ ಹಿಂದೆ ಮಾಜಿ ಮಿಸ್ ಯೂನಿವರ್ಸ್ ಸುಶ್ಮಿತಾ ಸೇನ್, ಅದಾಗಲೇ ವಿವಾಹಿತರಾಗಿದ್ದ ನಿರ್ದೇಶಕ ವಿಕ್ರಮ್ ಭಟ್ ರೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ವಿಚಾರ ಆಗ ಸಂಚಲನ ಸೃಷ್ಟಿಸಿತ್ತು.

ಇದೀಗ ಈ ಕುರಿತು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ವಿಕ್ರಮ್ ಭಟ್, ಸುಶ್ಮಿತಾ ಸೇನ್ ಹಾಗೂ ಅಮಿಷಾ ಪಟೇಲ್ ಜೊತೆ ತಾವು ಹೊಂದಿದ್ದ ಸಂಬಂಧದ ಕುರಿತು ಬಾಯ್ಬಿಟ್ಟಿದ್ದಾರೆ. ಅವರಿಬ್ಬರೊಂದಿಗೆ ತಾವು ಆತ್ಮೀಯವಾಗಿದ್ದರೂ ವಿವಾಹವಾಗುವ ಯಾವುದೇ ಇರಾದೆ ಹೊಂದಿರಲಿಲ್ಲವೆಂದು ವಿಕ್ರಮ್ ಭಟ್ ಸ್ಪಷ್ಟಪಡಿಸಿದ್ದಾರೆ.

ಆದರೆ ಈ ಕಾರಣಕ್ಕಾಗಿ ನನ್ನ ಪತ್ನಿ ಹಾಗೂ ಮಗುವಿಗೆ ಸಾಕಷ್ಟು ನೋವು ನೀಡಿದ್ದೇನೆ ಎಂದಿರುವ ವಿಕ್ರಮ್ ಭಟ್, ಕೆಲ ತಪ್ಪುಗಳಿಂದ ನಾನು ಈಗ ಪಾಠ ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...