alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಮಾ ವಿವಾದಿತ ಟ್ವೀಟ್ ಬೆಂಬಲಿಸಿದ ಐಟಂ ಬೆಡಗಿ

rakhi-sawant

ಮಹಿಳಾ ದಿನದಂದು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ತ್ರೀಯರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದರು. ಇದೀಗ ಐಟಂ ರಾಣಿ ರಾಖಿ ಸಾವಂತ್, ಆರ್ ಜಿ ವಿ ಹೇಳಿದ್ದೇ ಸರಿ ಎನ್ನುತ್ತಿದ್ದಾಳೆ.

‘ಪ್ರತಿ ಮಹಿಳೆಯೂ ಅಡುಗೆ ಮನೆಯ ತನ್ನ ಜವಾಬ್ಧಾರಿ ಅರಿಯಬೇಕು, ಪುರುಷನನ್ನು ತೃಪ್ತಿಪಡಿಸಬೇಕು. ರಾಮ್ ಗೋಪಾಲ್ ವರ್ಮಾ ಹೇಳಿದ್ದು ಸರಿಯಾಗಿಯೇ ಇದೆ, ಅವರ ಹೇಳಿಕೆಗೆ ನನ್ನ ಬೆಂಬಲವಿದೆ, ಪುರುಷನನ್ನು ಖುಷಿಪಡಿಸಲು ಮಹಿಳೆಯರು ಕೋಚಿಂಗ್ ಕ್ಲಾಸ್ ಗೆ ಹೋಗಬೇಕು’ ಎಂದಿದ್ದಾಳೆ.

ಮಹಿಳೆಯರ ದಿನದಂದು ರಾಮ್ ಗೋಪಾಲ್ ವರ್ಮಾ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ‘ಮಹಿಳೆಯರು ಮಕ್ಕಳನ್ನು ಬೆಳೆಸುವುದರಲ್ಲಿ ಪತಿಯನ್ನು ಮರೆತುಬಿಡ್ತಾರೆ, ಇದರಿಂದಾಗಿ 20-30 ವರ್ಷಗಳಲ್ಲೇ ಆತ ಸಂಬಂಧವನ್ನೇ ಮರೆಯುವಂತಾಗುತ್ತದೆ, ಪರಿಣಾಮ ಸುಂದರ ಪರಸ್ತ್ರೀಯತ್ತ ಆಕರ್ಷಿತನಾಗುತ್ತಾನೆ. ಮಹಿಳೆಯರು ಸನ್ನಿ ಲಿಯೋನ್ ಳಂತೆ ಪುರುಷರನ್ನು ಖುಷಿಪಡಿಸಬೇಕು’ ಅಂತಾ ಟ್ವೀಟ್ ಮಾಡಿದ್ದರು. ಆರ್ ಜಿ ವಿ ಅವಹೇಳನಕಾರಿ ಟ್ವೀಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದರಿಂದ ನಂತರ ಕ್ಷಮೆ ಕೇಳಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...