alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ ಬಾಲಿವುಡ್ ನಟನ ಟ್ವೀಟ್

‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರೋ ಸಿದ್ದಾರ್ಥ್ ಮಲ್ಹೋತ್ರಾಗೆ ಯಾಕೋ ಅದೃಷ್ಟವೇ ಸರಿಯಿದ್ದಂತಿಲ್ಲ. ಸಹ ನಟ ವರುಣ್ ಧವನ್ ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ಕೊಡ್ತಿದ್ದಾರೆ. ಅವರು ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ.

ಆದ್ರೆ ಸಿದ್ದಾರ್ಥ್ ಮಲ್ಹೋತ್ರಾ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿವೆ. ಬಾರ್ ಬಾರ್ ದೇಖೋ ಚಿತ್ರದ ಸೋಲನ್ನು ಅರಗಿಸಿಕೊಳ್ಳುವ ಮುನ್ನವೇ, ಸಿದ್ ಅಭಿನಯದ ‘ಎ ಜಂಟಲ್ ಮ್ಯಾನ್’ ಚಿತ್ರ ಕೂಡ ಫ್ಲಾಪ್ ಆಗಿದೆ. ಇದರ ಜೊತೆಗೆ ಸಿದ್ದಾರ್ಥ್ ವೈಯಕ್ತಿಕ ಬದುಕಿನಲ್ಲೂ ಏರುಪೇರಾಗಿದೆ.

ನಟಿ ಆಲಿಯಾ ಭಟ್ ಜೊತೆಗೆ ಸಿದ್ಧಾರ್ಥ್ ಮಲ್ಹೋತ್ರಾ ಬ್ರೇಕಪ್ ಮಾಡ್ಕೊಂಡಿದ್ದಾರೆ ಅನ್ನೋ ಸುದ್ದಿ ಹಲವು ದಿನಗಳಿಂದ್ಲೂ ಹರಿದಾಡ್ತಿದೆ. ಇದೀಗ ಸಿದ್ದಾರ್ಥ್ ಹಾಕಿರೊ ಟ್ವೀಟ್ ಒಂದು ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ಸಾರಿ ಐ ಆ್ಯಮ್ ಡನ್ ಅಂತಾ ಸಿದ್ ಟ್ವೀಟ್ ಮಾಡಿದ್ದಾರೆ.

ತಮ್ಮ ಇಮೇಜ್ ಅನ್ನೂ ತೆಗೆದು ಪೂರ್ತಿ ಖಾಲಿ ಕಪ್ಪನೆಯ ಇಮೇಜ್ ಹಾಕಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟು ಸಿದ್ ಈ ರೀತಿ ಪೋಸ್ಟ್ ಹಾಕಿದ್ದಾರಾ? ಅಥವಾ ಇದು ಅವರ ಹೊಸ ಚಿತ್ರ ‘Aiyaary’ ಪ್ರಮೋಷನ್ ಗಿಮಿಕ್ಕಾ ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...