alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಹುಬಲಿ-2 ಟಿಕೆಟ್ ಗಾಗಿ 3 ಕಿಲೋಮೀಟರ್ ಕ್ಯೂ

bahubali_lhebw4y

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಬಾಹುಬಲಿ ಚಿತ್ರ ತೆರೆಗೆ ಬಂದ ನಂತ್ರ ಸಿನಿ ಪ್ರಿಯರನ್ನು ಈವರೆಗೆ ಕಾಡ್ತಾ ಇರುವ ಬಹುಮುಖ್ಯ ಪ್ರಶ್ನೆ. ಕೋಟಿ ಜನರ ತಲೆ ಕೆಡಿಸಿರುವ ಈ ಪ್ರಶ್ನೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. ಮೊದಲ ಶೋ ನೋಡೋರು ಹಾಗೂ ಹೀಗೋ ಒಂದು ತಿಂಗಳ ಹಿಂದಿನಿಂದ ಕಸರತ್ತು ಮಾಡಿ ಟಿಕೆಟ್ ಪಡೆದಿದ್ದಾರೆ. ಆದ್ರೆ ಉಳಿದ ಶೋಗಳ ಟಿಕೆಟ್ ಗಾಗಿ ಸಿನಿಪ್ರಿಯರ ಪರದಾಟ ನೋಡುವಂತಿದೆ.

ಹೈದ್ರಾಬಾದ್ ನ ಪರಿಸ್ಥಿತಿ ಸಂಪೂರ್ಣ ಬಾಹುಬಲಿಮಯವಾಗಿದೆ. ಎಲ್ಲಿ ನೋಡಿದ್ರೂ ಬಾಹುಬಲಿಯದ್ದೇ ಮಾತು. ಬಾಹುಬಲಿ-2 ನೋಡಲು ಕಾತರರಾಗಿರುವ ಅಭಿಮಾನಿಗಳು ಟಿಕೆಟ್ ಗಾಗಿ ಅಲೆದಾಡ್ತಿದ್ದಾರೆ. ಒಂದು ಥಿಯೇಟರ್ ನಲ್ಲಿ ಟಿಕೆಟ್ ಸಿಕ್ಕಿಲ್ಲವಾದ್ರೆ ಇನ್ನೊಂದು ಥಿಯೇಟರ್ ಗೆ ದೌಡಾಯಿಸುತ್ತಿದ್ದಾರೆ. ಕೆಲ ಥಿಯೇಟರ್ ಗಳ ಮುಂದೆ 3 ಕಿಲೋಮೀಟರ್ ದೂರದವರೆಗೂ ಕ್ಯೂ ಇದೆ. ವೀಕೆಂಡ್ ನಲ್ಲಿ ಸಿನಿಮಾ ನೋಡ ಬಯಸಿದವರು ಇಂದೇ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡ್ತಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಕ್ಯೂನಲ್ಲಿ ನಿಂತ ಜನರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ.

ಹೈದ್ರಾಬಾದ್ ನಲ್ಲಿ ಬಾಹುಬಲಿ-2 ಟಿಕೆಟ್ ಬೆಲೆ 250. ಮಾಲ್ ಗಳಲ್ಲಿ 600 ರೂಪಾಯಿ. ಬ್ಲಾಕ್ ಮಾರುಕಟ್ಟೆಯಲ್ಲಿ ಸಾವಿರದಿಂದ 4 ಸಾವಿರ ರೂಪಾಯಿಗೂ ಟಿಕೆಟ್ ಮಾರಾಟವಾಗ್ತಾ ಇದೆ.

ವಿಶೇಷವೆಂದ್ರೆ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ದಾಖಲೆಗಳನ್ನು ಬರೆದಿದೆ. 8 ಸಾವಿರ ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯಾಗ್ತಾ ಇದ್ದು, ಇದು ಕೂಡ ಒಂದು ದಾಖಲೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...