alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಮನೆಗೆ ಹುಚ್ಚ ವೆಂಕಟ್, ಕಾರಣವೇನು ಗೊತ್ತಾ?

ನಟ, ನಿರ್ಮಾಪಕ ಹುಚ್ಚ ವೆಂಕಟ್ ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಅವರ ಜೆಪಿ ನಗರದ ನಿವಾಸಕ್ಕೆ ಆಗಮಿಸಿದ್ದರು. ಆದರೆ ಮುಖ್ಯಮಂತ್ರಿಗಳ ಭೇಟಿ ಸಾಧ್ಯವಾಗದ ಕಾರಣ ತೀವ್ರ ಆಕ್ರೋಶಗೊಂಡಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹುಚ್ಚ ವೆಂಕಟ್, ರೈತರ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಬಯಸಿದ್ದೆ. ಆದರೆ ಅವರ ಆಪ್ತ ಸಹಾಯಕರು ಅದಕ್ಕೆ ಅವಕಾಶ ನೀಡಲಿಲ್ಲ ಎಂದು ದೂರಿದರು.

ರೈತರ ಸಾಲ ಮನ್ನಾ ಮಾಡದಿದ್ದರೆ ನಾನು ಬಿಡುವುದಿಲ್ಲ. ಸಾಲ ಮನ್ನಾ ಮಾಡಲು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಲಿ, ಆದರೆ ಸಾಲಮನ್ನಾ ಮಾಡಲೇಬೇಕು ಎಂದ ಹುಚ್ಚ ವೆಂಕಟ್, ಇನ್ನು ಮುಂದೆ ಸಿಎಂ ಮನೆಗೆ ನನ್ನ ಎಕ್ಕಡ ಕೂಡ ಕಾಲಿಡುವುದಿಲ್ಲವೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...