alex Certify
ಕನ್ನಡ ದುನಿಯಾ       Mobile App
       

Kannada Duniya

ಹುಚ್ಚ ವೆಂಕಟ್ ನ ಹೊಸ ವರಸೆ…..

huchcha-venkat-rachanaರಿಯಾಲಿಟಿ ಷೋ ಒಂದರಲ್ಲಿ ತಮಗೆ ಜೋಡಿಯಾಗಿದ್ದ ರಚನಾ, ನಿಜ ಜೀವನದಲ್ಲೂ ಜೊತೆಯಾಗುವುದಾಗಿ ಹೇಳಿ ಮಾತು ಕೊಟ್ಟು ಈಗ ಮೋಸ ಮಾಡಿದ್ದಾರೆಂದು ಫಿನಾಯಿಲ್ ಕುಡಿದು ಮಾಧ್ಯಮಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದ ಹುಚ್ಚ ವೆಂಕಟ್ ಈಗ ಹೊಸ ವರಸೆ ತೋರಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹುಚ್ಚ ವೆಂಕಟ್, ಇದು ನನ್ನ ವೈಯಕ್ತಿಕ ವಿಷಯ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೋಗುವುದಿಲ್ಲ. ಹಾಗೂ ರಚನಾರ ಸುದ್ದಿಗೂ ಹೋಗುವುದಿಲ್ಲವೆಂದಿದ್ದಾರೆ.

ಈ ವೇಳೆ ಮಾಧ್ಯಮದವರು ಕೇಳಿದ ಕೆಲ ಪ್ರಶ್ನೆಗಳಿಗೆ ಹುಚ್ಚ ವೆಂಕಟ್ ಕಕ್ಕಾಬಿಕ್ಕಿಯಾಗಿದ್ದಾರೆ. ಫಿನಾಯಿಲ್ ಕುಡಿದ ಸಂದರ್ಭದಲ್ಲಿ ಖುದ್ದು ಮಾಧ್ಯಮಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಹುಚ್ಚ ವೆಂಕಟ್, ಅದು ಭಾರೀ ಸುದ್ದಿಯಾದ ಬಳಿಕ ಈಗ ಅದು ವೈಯಕ್ತಿಕ ಎಂದು ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ. ಈ ಸುದ್ದಿಯನ್ನು ದೊಡ್ಡದಾಗಿ ಮಾಡಿದ್ದ ವೆಂಕಟ್ ಗೆ ಇದರಿಂದ ಒಬ್ಬ ಹೆಣ್ಣು ಮಗಳಿಗೆ ಕೆಟ್ಟ ಹೆಸರು ಬರುತ್ತದೆಂಬ ಅರಿವಿರಲಿಲ್ಲವೇ ಎಂಬ ಪ್ರಶ್ನೆ ಈಗ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...