alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಸಕ ಮುನಿರತ್ನ ವಿರುದ್ಧ ಹುಚ್ಚ ವೆಂಕಟ್ ಕಿಡಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮತದಾರರನ್ನು ಸೆಳೆಯಲು ರಾಜಕಾರಣಿಗಳು ಗಿಫ್ಟ್ ಕೊಡುವ ಪ್ರಕ್ರಿಯೆ ಈಗಾಗಲೇ ಅನೇಕ ಕಡೆ ಆರಂಭವಾಗಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕ ಮುನಿರತ್ನ ಬೆಂಬಲಿಗರು ಕುಕ್ಕರ್ ಹಂಚಿದ್ದಾರೆ. ಕುಕ್ಕರ್ ಬಾಕ್ಸ್ ಮೇಲೆ ತಾಯಿ ರಾಜರಾಜೇಶ್ವರಿ ಆಶೀರ್ವಾದಿಂದ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಬರೆಯಲಾಗಿದ್ದು, ಇದನ್ನು ಗಮನಿಸಿದ ಹೆಚ್ಚ ವೆಂಕಟ್ ವಿಡಿಯೋ ಹರಿಬಿಟ್ಟಿದ್ದಾರೆ.

ವಿಡಿಯೋದಲ್ಲಿ ಮತದಾರರಿಗೆ ಮೋಸ ಮಾಡಲು ಹೊರಟಿದ್ದೀರಿ ಎಂದು ಬಾಕ್ಸ್ ಮೇಲೆ ಬರೆದ ಹೇಳಿಕೆಯನ್ನಾಧರಿಸಿ ಕಿಡಿಕಾರಿದ್ದಾರೆ. ಬಿಸಿಯೂಟ ನೌಕರರು ಹಗಲು, ರಾತ್ರಿ ಹೋರಾಟ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಬಾರದ, ಕಾಳಜಿ ತೋರದ ನೀವು, ವೋಟ್ ಕೇಳಲು ಈಗ ಬಂದಿದ್ದೀರಿ. ವೋಟ್ ಗಾಗಿ ಕುಕ್ಕರ್ ಕೊಡುತ್ತೀದ್ದೀರಿ ಎಂದು ಟೀಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...