alex Certify
ಕನ್ನಡ ದುನಿಯಾ       Mobile App
       

Kannada Duniya

ಸಿದ್ಧಾರೂಢ ಮಠದೊಂದಿಗೆ ಕಾಜೋಲ್ ಕುಟುಂಬದ ನಂಟು

ಹುಬ್ಬಳ್ಳಿ: ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಅದೇ ರೀತಿ ಸೆಲೆಬ್ರಿಟಿಗಳು ಕೂಡ ಮಠದ ಭಕ್ತರಾಗಿದ್ದು, ಆಗಾಗ ಬಂದು ಹೋಗುತ್ತಾರೆ.

ಬಾಲಿವುಡ್ ನಟಿ ಕಾಜೋಲ್ ಕುಟುಂಬದವರು 5 ದಶಕಗಳಿಂದ ಮಠದೊಂದಿಗೆ ನಂಟು ಹೊಂದಿದ್ದಾರೆ. ಕಾಜೊಲ್ ಅಜ್ಜನ ಕಾಲದಿಂದಲೂ ಪ್ರತಿವರ್ಷ ಮಠಕ್ಕೆ ಭೇಟಿ ನೀಡಿ ಗದ್ದುಗೆಯ ದರ್ಶನ ಪಡೆಯುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಅವರ ಕುಟುಂಬದವರೊಬ್ಬರು ಕಾರ್ತಿಕ ಮಾಸದಲ್ಲಿ ಆಗಮಿಸಿ ದೀಪ ಹಚ್ಚಿ ಪೂಜೆ ಸಲ್ಲಿಸುತ್ತಾರೆ. ಕಾಜೋಲ್ ಅವರ ತಾಯಿ, ಒಂದು ಕಾಲದ ನಟಿ ತನುಜಾ ಕೂಡ ಮಠಕ್ಕೆ ಆಗಾಗ ಭೇಟಿ ನೀಡುತ್ತಾರೆ. ಕಾಜೋಲ್ ಬಹುವರ್ಷಗಳ ಬಳಿಕ ಮಠಕ್ಕೆ ಭೇಟಿ ನೀಡಿದ್ದಾರೆ.

ಗುರುವಾರ ಕಾಜೋಲ್, ತನುಜಾ, ಕಾಜೋಲ್ ಪುತ್ರ ಯೋಗಿ, ತಂಗಿ ತನಿಷಾ ಅವರು ವಿಶೇಷ ವಿಮಾನದಲ್ಲಿ ಆಗಮಿಸಿ ಸಿದ್ಧಾರೂಢರ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.

ಮಠದೊಂದಿಗೆ ನಂಟು ಹೊಂದಿರುವ ಕಾಜೋಲ್ ಕುಟುಂಬ ಪ್ರತಿವರ್ಷ ಗೌಪ್ಯವಾಗಿ ಬಂದು ಹೋಗುತ್ತಿದ್ದು, ಈ ಬಾರಿ ಅವರು ಆಗಮಿಸಿದ ಸುದ್ದಿ ತಿಳಿದ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...