alex Certify
ಕನ್ನಡ ದುನಿಯಾ       Mobile App
       

Kannada Duniya

ತುಪ್ಪದ ಹುಡುಗಿಗೆ ಹುಬ್ಬಳ್ಳಿ ಫೇವರಿಟ್ ಅಂತೆ…!

ತುಪ್ಪ ಬೇಕಾ ತುಪ್ಪಾ ಎಂದು ಕುಣಿದು ಕುಪ್ಪಳಿಸಿ ಪಡ್ಡೆ ಹುಡುಗರ ಮನಸಿಗೆ ಲಗ್ಗೆ ಹಾಕಿದ್ದ ನಟಿ ರಾಗಿಣಿ ದ್ವಿವೇದಿ ಅವರಿಗೆ ಹುಬ್ಬಳ್ಳಿ ಬಲು ಇಷ್ಟವಂತೆ. ಹುಬ್ಬಳ್ಳಿಯ ಕಡಕ್ ರೊಟ್ಟಿ, ಚಟ್ಣಿ ಎಂದರೆ ಇನ್ನೂ ಇಷ್ಟವಂತೆ.

ಕರ್ನಾಟಕ ಪ್ರೀಮಿಯರ್ ಲೀಗ್ ಹಿನ್ನೆಲೆ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತಿಗಿಳಿದಿದ್ದು, ಹುಬ್ಬಳ್ಳಿ ಪ್ರೀತಿಯನ್ನು ಹೊರಗೆಡಹಿದರು.

ಈ ಹಿಂದೆ ಬಳ್ಳಾರಿ ತಂಡದ ಸಹ ಮಾಲೀಕರಾಗಿದ್ದ ನಟಿ ಈಗ ಪಂದ್ಯಾವಳಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ಮುಂಬರುವ ಪಂದ್ಯಾವಳಿಯ ಬಗ್ಗೆ ಬಹಳ ಉತ್ಸುಕಳಾಗಿದ್ದಾನೆ ಎಂದ ಅವರು, ಹುಬ್ಬಳ್ಳಿಯ ಪಂದ್ಯಗಳನ್ನು ಎದುರು ನೋಡುತ್ತಿದ್ದೇನೆ ಎಂದರು.

ರಾಗಿಣಿ ಐಪಿಎಸ್ ಚಿತ್ರವನ್ನು ಹುಬ್ಬಳ್ಳಿ ಭಾಗದಲ್ಲಿ ಚಿತ್ರೀಕರಿಸಲಾಗಿತ್ತು. ಹೀಗಾಗಿ ಅನೇಕ ನೆನಪುಗಳು ಇವೆ. ನಾನು ಆ ಪ್ರದೇಶದ ಆಹಾರ ಇಷ್ಟಪಡುತ್ತೇನೆ, ವಿಶೇಷವಾಗಿ ಊಟಕ್ಕೆ ಕಡಕ್ ರೊಟ್ಟಿ ಮತ್ತು ನನ್ನ ನೆಚ್ಚಿನ ಕಡಲೆಕಾಯಿ ಚಟ್ಣಿ ಇಷ್ಟಪಡುತ್ತೇನೆ ಎಂದು ವಿವರಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...