alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರೈಲರ್ ನಲ್ಲೇ ಹವಾ ಸೃಷ್ಠಿಸಿದ ‘ಮೊಹೆಂಜೊ ದಾರೊ’

Hrithik-Roshan-Mohen-jo-Daro

ಭಾರತದ ಇತಿಹಾಸ ಓದುವ ಸಂದರ್ಭದಲ್ಲಿ ಕ್ರಿಸ್ತಪೂರ್ವ ಕಾಲಘಟ್ಟದ ಹರಪ್ಪ ಮೆಹೆಂಜೊ ದಾರೊ ಬಗ್ಗೆ ಓದಿರುತ್ತೀರಿ, ಆ ಕಾಲಘಟ್ದದಲ್ಲಿ ನಡೆದ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನವನ್ನು ‘ಲಗಾನ್’, ‘ಜೋಧಾ ಅಕ್ಬರ್’ ಸಿನಿಮಾ ನಿರ್ದೇಶಕರು ಮಾಡಿದ್ದಾರೆ.

 

ಭಾರತೀಯ ಚಿತ್ರರಂಗದ ಗಮನ ಸೆಳೆದ ದೊಡ್ಡ ಮಟ್ಟದ ಚಿತ್ರ ‘ಮೆಹೆಂಜೊ ದಾರೊ’ ಟ್ರೈಲರ್ ರಿಲೀಸ್ ಆಗಿದ್ದು, ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 3 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಇತಿಹಾಸದಲ್ಲಿ ಕಂಡು ಬರುವ ದೃಶ್ಯಗಳ ವೈಭವವನ್ನು ಈ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಪ್ರಾಚೀನ ಯುಗದ ಕತೆ ಇಲ್ಲಿ ಸಿನಿಮಾ ಆಗಿದೆ. ಬ್ರಿಟೀಷರು, ಮೊಘಲರು ಬರುವುದಕ್ಕಿಂತ ಮೊದಲಿನ, ಬುದ್ಧನಿಗಿಂತ ಹಿಂದಿನ ಕಥಾನಕ ಹೊಂದಿರುವ ಪ್ರಾಚೀನ ಕಾಲದ ಪ್ರೇಮಕತೆಯಲ್ಲಿ ಹೃತಿಕ್ ರೋಷನ್, ಕನ್ನಡತಿ ಪೂಜಾ ಹೆಗಡೆ ನಟಿಸಿದ್ದಾರೆ.

 

ಈಗಾಗಲೇ ತಮಿಳು, ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಪೂಜಾ ಹೆಗ್ಡೆ ಅವರಿಗೆ ಇದು ಮೊದಲ ಬಾಲಿವುಡ್ ಸಿನಿಮಾ. ಯುಟಿವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿದ್ಧಾರ್ಥ್ ರಾಯ್ ಕಪೂರ್, ಸುನಿತಾ ಗೋವಾರಿಕರ್ ಚಿತ್ರ ನಿರ್ಮಾಣ ಮಾಡಿದ್ದು, ಅಶುತೋಷ್ ಗೋವಾರಿಕರ್ ನಿರ್ದೇಶನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...