alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಿಗಾಗಿ ಮತ್ತೆ ಮದುವೆಯಾಗ್ತಿದೆ ವಿಚ್ಛೇದಿತ ಜೋಡಿ

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸುಸೇನ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ. ಮಕ್ಕಳಿಗಾಗಿ ಇಬ್ಬರೂ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

2013ರಲ್ಲಿ ಹೃತಿಕ್ ಹಾಗೂ ಸುಸೇನ್ ಬೇರೆಯಾಗಿದ್ದರು. 2014ರಲ್ಲಿ ದಂಪತಿಗೆ ವಿಚ್ಛೇದನ ಸಿಕ್ಕಿತ್ತು. ವಿಚ್ಛೇದನ ನಂತ್ರ ಇಬ್ಬರು ಮಕ್ಕಳಲ್ಲಿ ಸಾಕಷ್ಟು ಬದಲಾವಣೆಯಾಗಿದೆಯಂತೆ. ತಂದೆ-ತಾಯಿ ವಿಚ್ಛೇದನ ಪಡೆದಿರುವುದ್ರಿಂದ ಇಬ್ಬರು ಮಕ್ಕಳು ಅಸಮಾಧಾನಗೊಂಡಿದ್ದಾರಂತೆ.

ಬೇರೆಯವರನ್ನು ಭೇಟಿ ಮಾಡಲು, ಅವ್ರ ಜೊತೆ ಮಾತನಾಡಲು ಮಕ್ಕಳು ಹಿಂಜರಿಯುತ್ತಿದ್ದಾರಂತೆ. ಇದು ಅವ್ರ ಓದಿನ ಮೇಲೂ ಪರಿಣಾಮ ಬೀರುತ್ತಿದೆ. ಮಕ್ಕಳಿಗಾಗಿಯೇ ವಿಚ್ಛೇದನ ನಂತ್ರವೂ ಹೃತಿಕ್ ಸುಸೇನ್ ಭೇಟಿಯಾಗ್ತಿದ್ದ. ಆಗಾಗ ಒಟ್ಟಿಗೆ ಪ್ರವಾಸಕ್ಕೆ ಕೂಡ ಹೋಗ್ತಿದ್ದ. ಹೃತಿಕ್ ಹಾಗೂ ಸುಸೇನ್ ವಿಚ್ಛೇದನ ಪಡೆದಿದ್ದಾರೆ ಎಂಬುದು ಮಕ್ಕಳಿಗೆ ಸ್ಪಷ್ಟವಾಗಿದೆ. ಆದ್ರೆ ಅಮ್ಮನ ಜೊತೆ ಸದಾ ಅಪ್ಪನಿರಬೇಕೆಂಬುದು ಅವರ ಆಸೆ. ಮಕ್ಕಳ ನೋವಿಗೆ ಸ್ಪಂದಿಸಲು ಮುಂದಾಗಿರುವ ಹೃತಿಕ್ –ಸುಸೇನ್ ಮತ್ತೆ ಮದುವೆಯಾಗುವ ಯೋಚನೆ ಮಾಡುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...