alex Certify
ಕನ್ನಡ ದುನಿಯಾ       Mobile App
       

Kannada Duniya

2 ವರ್ಷಗಳ ನಂತ್ರ ಕಂಗನಾ ಆರೋಪಕ್ಕೆ ಹೃತಿಕ್ ಉತ್ತರ

ನಟ ಹೃತಿಕ್ ರೋಷನ್ ಹಾಗೂ ಕಂಗನಾ ಗಲಾಟೆಗೆ ಹೊಸ ರೂಪ ಸಿಕ್ಕಿದೆ. ಸತತ ಎರಡು ವರ್ಷಗಳಿಂದ ತುಟಿ ಬಿಚ್ಚದ ಹೃತಿಕ್ ರೋಷನ್ ಇದೇ ಮೊದಲ ಬಾರಿ ಕಂಗನಾ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 766 ಶಬ್ಧಗಳಲ್ಲಿ ಕಂಗನಾ ಆರೋಪಗಳಿಗೆ ಹೃತಿಕ್ ಉತ್ತರ ನೀಡಿದ್ದಾರೆ. ಪತ್ರದ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.

ಟ್ವೀಟರ್ ನಲ್ಲಿ ಎರಡು ಪುಟಗಳ ಪತ್ರವನ್ನು ಪೋಸ್ಟ್ ಮಾಡಿರುವ ಹೃತಿಕ್ ನಾನು ಸೃಜನಶೀಲ, ರಚನಾತ್ಮಕ ಮಾರ್ಗದಲ್ಲಿ ನಡೆಯಲು ಇಷ್ಟಪಡ್ತೇನೆ. ಅರ್ಥವಿಲ್ಲದ ವಿಷ್ಯಗಳನ್ನು ನಿರ್ಲಕ್ಷ್ಯಿಸಲು ಬಯಸುತ್ತೇನೆ ಎಂದಿದ್ದಾರೆ. ಅನಗತ್ಯ ಮಾತುಗಳಿಂದ ತಪ್ಪಿಸಿಕೊಳ್ಳಲು ಹಾಗೂ ಶಿಸ್ತಿನಿಂದ ನಡೆಯಲು ಕೆಲ ವಿಷ್ಯಗಳನ್ನು ನಿರ್ಲಕ್ಷ್ಯಿಸುವುದು ಉತ್ತಮ. ಆದ್ರೆ ಕೆಲವೊಮ್ಮೆ ಅಪವಾದಗಳನ್ನು ನಿರ್ಲಕ್ಷ್ಯಿಸಿದಷ್ಟು ಸಮಸ್ಯೆ ದೊಡ್ಡದಾಗುತ್ತದೆ. ನನ್ನ ಪರಿಸ್ಥಿತಿಯೂ ಹಾಗೆ ಆಗಿದೆ ಎಂದಿದ್ದಾರೆ.

ನಾನು ಸರಿಯಾಗಿದ್ದೇನೆಂದು ತೋರಿಸಲು ಈ ಮಾರ್ಗದಲ್ಲಿ ನಡೆಯುವುದು ನನಗೆ ಸರಿ ಎನ್ನಿಸುತ್ತಿಲ್ಲ. ನನ್ನನ್ನು ಈ ವಿಷ್ಯದಲ್ಲಿ ಎಳೆದು ತರಲಾಗ್ತಿದೆ. ಸತ್ಯವಾಗ್ಲೂ ನಾನು ನನ್ನ ಜೀವನದಲ್ಲಿ ಈ ಮಹಿಳೆ (ಕಂಗನಾ) ಮುಖಾಮುಖಿಯಾಗಿಲ್ಲ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ ನಿಜ. ಆದ್ರೆ ವೈಯಕ್ತಿಕ ಮಾತುಕತೆಯಾಗಿಲ್ಲ ಎಂದಿದ್ದಾರೆ.

ನಾನು ನನ್ನ ಮೇಲೆ ಬಂದಿರುವ ಆರೋಪದ ವಿರುದ್ಧ ಹೋರಾಡುತ್ತಿಲ್ಲ. ನನಗೆ ಗುಡ್ ಬಾಯ್ ಎನ್ನಿಸಿಕೊಳ್ಳುವ ಆಸೆಯೂ ಇಲ್ಲ. ನನ್ನ ತಪ್ಪುಗಳು ನನಗೆ ತಿಳಿದಿದೆ. ನಾನು ಮನುಷ್ಯ ಎಂದು ಹೃತಿಕ್ ಟ್ವಿಟ್ ಮಾಡಿದ್ದಾರೆ. 2014ರಲ್ಲಿ ನಾವಿಬ್ಬರು ಪ್ಯಾರಿಸ್ ನಲ್ಲಿ ಒಟ್ಟಿಗಿದ್ದೆವು ಎಂದು ಆರೋಪ ಮಾಡಲಾಗಿದೆ. ಆದ್ರೆ ಜನವರಿ 2014ರಲ್ಲಿ ನಾನು ದೇಶ ಬಿಟ್ಟು ಹೋಗಿರಲಿಲ್ಲ. ಫೋಟೋಶಾಪ್ ನಲ್ಲಿ ಫೋಟೋ ಎಡಿಟ್ ಮಾಡಿ ಎಲ್ಲರನ್ನೂ ನಂಬಿಸಲಾಗ್ತಿದೆ. ಇ-ಮೇಲ್ ಸಾಕ್ಷಿ ನೀಡಲಾಗ್ತಿದೆ. ಇದೆಲ್ಲದರ ಸತ್ಯ ಸದ್ಯದಲ್ಲಿಯೇ ಬಯಲಾಗಲಿದೆ ಎಂದು ಹೃತಿಕ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...