alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವರ ಸವಾಲು ಸ್ವೀಕರಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ನಟ

ಸೆಲೆಬ್ರಿಟಿಗಳು ಈಗ ಫಿಟ್ನೆಸ್ ಚಾಲೆಂಜಿಗೆ ಮುಂದಾಗಿದ್ದಾರೆ. ಮೊದಲು ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್ ಈ ಚಾಲೆಂಜ್ ಆರಂಭಿಸಿದ್ದು, ತಮ್ಮ ಕಚೇರಿಯಲ್ಲಿ ಪುಶ್ ಅಪ್ ಮಾಡುತ್ತಿದ್ದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಅವರು, ಕ್ರಿಕೆಟಿಗ ವಿರಾಟ್ ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನ ಸವಾಲು ಸ್ವೀಕರಿಸಲು ಆಹ್ವಾನಿಸಿದ್ದರು.

ಸಚಿವರ ಸವಾಲು ಸ್ವೀಕರಿಸಿದ ವಿರಾಟ್ ಕೊಹ್ಲಿ ಒಂದು ವಿಡಿಯೋವನ್ನು ಪೋಸ್ಟ್ ಮಾಡಿ, ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹೇಂದ್ರ ಸಿಂಗ್ ಧೋನಿಯವರನ್ನು ಸವಾಲು ಸ್ವೀಕರಿಸುವಂತೆ ಹೇಳಿದ್ದರು. ವಿರಾಟ್ ಕೊಹ್ಲಿ ಅವರ ಸವಾಲು ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ, ಶೀಘ್ರದಲ್ಲೇ ತಮ್ಮ ಫಿಟ್ನೆಸ್ ವಿಡಿಯೋವನ್ನು ಶೇರ್ ಮಾಡುವುದಾಗಿ ತಿಳಿಸಿದ್ದಾರೆ.

ರಾಜ್ಯವರ್ಧನ್ ರಾಥೋಡ್ ರವರ ಸವಾಲು ಸ್ವೀಕರಿಸಿದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ತಮ್ಮ ಫಿಟ್ನೆಸ್ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಸಚಿವರ ಲಿಸ್ಟ್ ನಲ್ಲಿದ್ದ ಬಾಲಿವುಡ್ ನಟ ಹೃತಿಕ್ ರೋಷನ್ ಸವಾಲಿಗೆ ಜವಾಬು ನೀಡಲು ಹೋಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸೈಕಲ್ ಓಡಿಸುತ್ತಲೇ ಹೃತಿಕ್ ರೋಷನ್ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ವಿಡಿಯೋ ಜಾಲತಾಣಿಗರ ಟ್ರೋಲ್ ಗೆ ತುತ್ತಾಗಿದೆ. ಸೈಕಲ್ ಓಡಿಸುತ್ತಾ ವಿಡಿಯೊ ಮಾಡಿರುವುದು ತಪ್ಪು. ಇಂತಹ ತಪ್ಪನ್ನು ಮಾಡುವವರಿಗೆ ತಿಳಿಹೇಳಬೇಕಾದ ನೀವೇ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...