alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದನದ 4 ವರ್ಷದ ನಂತ್ರ ಮತ್ತೆ ಮದುವೆಯಾಗ್ತಿದೆ ಈ ಜೋಡಿ…?

ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಎಂದೇ ಖ್ಯಾತರಾಗಿರುವ ಹೃತಿಕ್ ರೋಷನ್ ಬಾಲಿವುಡ್ ಮೊದಲ ಚಿತ್ರದ ನಂತ್ರವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಾಲ್ಯದ ಗೆಳತಿ ಸುಸೇನ್ ಖಾನ್ ಮದುವೆಯಾಗಿದ್ದ ಹೃತಿಕ್ ರೋಷನ್ 14 ವರ್ಷಗಳ ನಂತ್ರ 2014ರಲ್ಲಿ ಬೇರೆಯಾಗಿದ್ರು.

ವಿಚ್ಛೇದನದ ನಂತ್ರವೂ ಹೃತಿಕ್ ರೋಷನ್ ಹಾಗೂ ಸುಸೇನ್ ಖಾನ್ ಒಂದಾಗಿ ಕಾಣಿಸಿಕೊಳ್ತಿದ್ದಾರೆ. ಮಕ್ಕಳ ಜೊತೆ ವಿದೇಶಗಳಿಗೆ ಹೋಗಿ ರಜಾ ಮಜಾ ಸವಿದಿದ್ದಾರೆ. ವಿಚ್ಛೇದನವಾಗಿ ನಾಲ್ಕು ವರ್ಷಗಳ ನಂತ್ರ ಮತ್ತೆ ಹಳೇ ಸಂಬಂಧಕ್ಕೆ ಹೊಸ ಅರ್ಥ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.

ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ ಚಿಂತನೆ ನಡೆಸಿರುವ ಹೃತಿಕ್ ರೋಷನ್ ಹಾಗೂ ಸುಸೇನ್ ಮತ್ತೊಮ್ಮೆ ಮದುವೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ಮದುವೆ ಬಗ್ಗೆ ಸುಸೇನ್ ಪ್ರತಿಕ್ರಿಯೆ ನೀಡಿದ್ದರು. ನಾವಿಬ್ಬರೂ ಒಳ್ಳೆ ಸ್ನೇಹಿತರು. ಮದುವೆ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದರು. ಆದ್ರೆ ಶೀಘ್ರವೇ ಮದುವೆಯಾಗಲು ಮುಂದಾಗಿದ್ದಾರೆಂದು ಮೂಲಗಳು ಹೇಳ್ತಿವೆ.

ಸದ್ಯ ಹೃತಿಕ್ ರೋಷನ್ ಸೂಪರ್ 30 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಚಿತ್ರ, ಕಂಗನಾ ಅಭಿನಯದ ಮಣಿಕರ್ಣಿಕಾ ಬಿಡುಗಡೆ ದಿನವೇ ಬಿಡುಗಡೆಯಾಗುವ ಸಾಧ್ಯತೆಯಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...