alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಗೆ ಬಂದ ಅತಿಥಿಗಳನ್ನು ಓಡಿಸ್ತಾರೆ ಅಮೀರ್ ಖಾನ್..!

aamir-khan_640x480_41426321146

ಮನೆಯಲ್ಲಿ, ಪಾರ್ಟಿ, ಫಂಕ್ಷನ್ ಅಂದಾಕ್ಷಣ ಅತಿಥಿಗಳು ಬರೋದು ಕಾಮನ್, ಒಮ್ಮೊಮ್ಮೆ ಅವರನ್ನು ಉಪಚರಿಸಿ ನಾವು ಸುಸ್ತಾಗಿರ್ತೇವೆ, ಆಗ ಇವರು ಬೇಗ ಹೊರಟರೆ ಸಾಕಪ್ಪ ಎನಿಸುತ್ತೆ. ಆದ್ರೆ ನೀವಿನ್ನು ಹೊರಡಿ ಅಂತಾ ನೇರವಾಗಿ ಹೇಳೋದು ಅಸಾಧ್ಯ. ಇದಕ್ಕೆ ನಟ ಅಮೀರ್ ಖಾನ್ ಬೆಸ್ಟ್ ಐಡಿಯಾ ಮಾಡ್ತಾರಂತೆ, ಎದ್ದು ನಿಂತು ನಿಮ್ಮನ್ನೆಲ್ಲ ಭೇಟಿಯಾಗಿದ್ದು ಬಹಳ ಸಂತೋಷ ಎನ್ನುತ್ತಾರಂತೆ, ನೀವಿನ್ನು ಹೊರಡಬಹುದು ಅನ್ನೋ ಸೂಚನೆ ಇದು. ಅಮೀರ್ ಖಾನ್ ಪರೋಕ್ಷವಾಗಿ ನೀಡಿದ ಸೂಚನೆಯನ್ನು ಅರ್ಥಮಾಡಿಕೊಂಡು ಅತಿಥಿಗಳು ಅಲ್ಲಿಂದ ಜಾಗ ಖಾಲಿ ಮಾಡ್ತಾರಂತೆ.

ಅಷ್ಟಕ್ಕೂ ಅಮೀರ್ ಗೆ ಈ ಐಡಿಯಾ ಕೊಟ್ಟವರು ನಟ ನಾಸಿರ್ ಹುಸೇನ್. ಸಮಯಕ್ಕೆ ನಾಸಿರ್ ಹುಸೇನ್ ಹೆಚ್ಚು ಮಹತ್ವ ನೀಡ್ತಾರೆ. ಅದೇನೆ ಕೆಲಸವಿದ್ರೂ, ಎಲ್ಲೇ ಇದ್ರೂ ಸಂಜೆ 6 ಗಂಟೆಗೆ ಅವರು ಮನೆಯಲ್ಲಿರಲೇಬೇಕು. ಊಟ, ತಿಂಡಿ, ನಿದ್ದೆ ಎಲ್ಲವೂ ಟೈಂ ಟು ಟೈಂ ಆಗಬೇಕು. ಮನೆಗೆ ಬಂದ ಅತಿಥಿಗಳನ್ನು ಕಳಿಸೋದು ಹೇಗೆ ಅನ್ನೋದನ್ನು ಕೂಡ ನಾಸಿರ್ ಹುಸೇನ್, ಅಮೀರ್ ಖಾನ್ ಗೆ ಹೇಳಿಕೊಟ್ಟಿದ್ದಾರೆ. ನಾಸಿರ್ ಹುಸೇನ್ ಅವರ ಜೀವನ ಚರಿತ್ರೆ ‘ಮ್ಯೂಸಿಕ್ ಮಸ್ತಿ, ಮಾಡರ್ನಿಟಿ : ದಿ ಸಿನೆಮಾ ಆಫ್ ನಾಸಿರ್ ಹುಸೇನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಮೀರ್ ಈ ವಿಷಯ ಬಹಿರಂಗಪಡಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...