alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಬೋಲ್ಡ್ ಮಾಡೋ ಕನಸು ಕಾಣ್ತಿದ್ದಾಳೆ ಈ ಹಾಟ್ ಬೆಡಗಿ

card-13-1

ನಟಿ ಸಯಾಮಿ ಖೇರ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ರವರ ದೊಡ್ಡ ಅಭಿಮಾನಿ. ಈಕೆ ಸಚಿನ್ ಜೊತೆ ಕ್ರಿಕೆಟ್ ಆಡುವ ಆಸೆ ವ್ಯಕ್ತಪಡಿಸಿದ್ದಾರೆ. ಸಚಿನ್ ಜೊತೆ ಕ್ರಿಕೆಟ್ ಆಡಿ ಅವರನ್ನು ಬೋಲ್ಡ್ ಮಾಡಬೇಕೆನ್ನುವುದು ಆಕೆಯ ಬಯಕೆ. ಸಚಿನ್ ಜೊತೆ ಕ್ರಿಕೆಟ್ ಆಡುವುದು ಆಕೆಯ ಬಹುದೊಡ್ಡ ಕನಸಂತೆ.

ಸಚಿನ್ ತೆಂಡೂಲ್ಕರ್ ರುಚಿಯಾಗಿ ಅಡುಗೆ ಮಾಡ್ತಾರೆ ಎಂಬುದನ್ನು ಕೇಳಿದ್ದೇನೆ. ಕ್ರಿಕೆಟ್ ಜೊತೆ ಅವರು ಮಾಡಿದ ಅಡುಗೆ ರುಚಿ ನೋಡಬೇಕೆನ್ನುವ ಬಯಕೆ ಇದೆ. ಇದ್ರಲ್ಲಿ ತಪ್ಪೇನಿಲ್ಲ ಎಂಬುದು ನನಗೆ ಗೊತ್ತು ಎಂದಿದ್ದಾರೆ ಖೇರ್. ರಾಕೇಶ್ ಓಂ ಪ್ರಕಾಶ ಮೆಹ್ರಾ ನಿರ್ದೇಶನದ ‘ಮಿರ್ಜಿಯಾ’ ಚಿತ್ರದ ಮೂಲಕ ಬಾಲಿವುಡ್ ವೃತ್ತಿಜೀವನ ಶುರುಮಾಡಿದ್ದಾಳೆ ಸಯಾಮಿ.

‘ಮಿರ್ಜಿಯಾ’ ಚಿತ್ರದ ಬಗ್ಗೆಯೂ ಖೇರ್ ಪ್ರತಿಕ್ರಿಯೆ ನೀಡಿದ್ದಾಳೆ. ಚಿತ್ರಕ್ಕಾಗಿ ಕಷ್ಟಪಟ್ಟಿದ್ದೇವೆ. ಜನರು ನಮ್ಮನ್ನು ಇಷ್ಟಪಟ್ಟಿದ್ದಾರೆ. ಚಿತ್ರದ ಕಥೆ ನೋಡಿ ನಾನು ಚಿತ್ರಕ್ಕೆ ಸಹಿ ಮಾಡಿದ್ದೆ. ಅದು 100 ಕೋಟಿ ಗಳಿಕೆ ಮಾಡುತ್ತೆ ಎನ್ನುವ ಕನಸು ಕಂಡು ನಾನು ಸಹಿ ಮಾಡಿರಲಿಲ್ಲ ಎಂದಿದ್ದಾಳೆ ಖೇರ್.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...