alex Certify
ಕನ್ನಡ ದುನಿಯಾ       Mobile App
       

Kannada Duniya

ರಾಖಿ ಸಾವಂತ್ ಗೆ ಹನಿಪ್ರೀತ್ ತಾಯಿಯಿಂದ ನೋಟೀಸ್

ಸಾದ್ವಿಗಳ ಮೇಲೆ ಅತ್ಯಾಚಾರವೆಸಗಿ ಜೈಲು ಸೇರಿರುವ ರಾಮ್ ರಹೀಂನ ದತ್ತು ಪುತ್ರಿ ಹನಿಪ್ರೀತ್ ತಾಯಿ, ನಟಿ ರಾಖಿ ಸಾವಂತ್ ವಿರುದ್ಧ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. 30 ದಿನಗಳೊಳಗೆ ರಾಖಿ ಸಾವಂತ್ ಕ್ಷಮೆ ಕೋರಬೇಕೆಂದು ಹನಿಪ್ರೀತ್ ತಾಯಿ ನೋಟೀಸ್ ನಲ್ಲಿ ಹೇಳಿದ್ದಾಳೆ.

ವಕೀಲ ಮೋಮಿಲ್ ಮಲ್ಲಿಕ್ ಮೂಲಕ ಹನಿಪ್ರೀತ್ ತಾಯಿ ರಾಖಿ ಸಾವಂತ್ ಗೆ ನೋಟೀಸ್ ಕಳುಹಿಸಿದ್ದಾರೆ. ರಾಮ್ ರಹೀಂ ಪ್ರಕರಣದಲ್ಲಿ ರಾಖಿ ಸಾವಂತ್, ಹನಿಪ್ರೀತ್ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾಳೆ. ಒಂದು ವೇಳೆ ರಾಖಿ ಸಾವಂತ್ ಕ್ಷಮೆ ಕೋರದೇ ಹೋದಲ್ಲಿ 5 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ನೋಟೀಸ್ ನಲ್ಲಿ ಹೇಳಲಾಗಿದೆ.

ಈ ಬಗ್ಗೆ ರಾಖಿ ಸಾವಂತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಮ್ ರಹೀಂ ಬಂಧನವಾಗ್ತಿದ್ದಂತೆ ರಾಮ್ ರಹೀಂ ಬಗ್ಗೆ ಅನೇಕ ಸತ್ಯಗಳು ಹೊರಗೆ ಬಂದಿದ್ದವು. ಈ ವೇಳೆ ನಟಿ ರಾಖಿ ಸಾವಂತ್ ಕೂಡ ತನ್ನ ಅಭಿಪ್ರಾಯ ಹೇಳಿದ್ದಳು. ಹನಿಪ್ರೀತ್-ರಾಮ್ ರಹೀಂ ಸಂಬಂಧದ ಬಗ್ಗೆಯೂ ರಾಖಿ ಮಾತನಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...