alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ಲುಕ್ ನಲ್ಲಿ ವಾಪಸ್ಸಾದ ಹನಿ ಸಿಂಗ್ -ವಿಡಿಯೋ ನೋಡಿ

honey

ಸಿಂಗರ್ ಯೋ ಯೋ ಹನಿ ಸಿಂಗ್ ಮತ್ತೆ ವಾಪಸ್ ಬಂದಿದ್ದಾರೆ. ಅನೇಕ ದಿನಗಳಿಂದ ಅಭಿಮಾನಿಗಳ ಮುಂದೆ ಬರದ ಹನಿ ಸಿಂಗ್ ಅವಾರ್ಡ್ ಪಂಕ್ಷನ್ ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹನಿ ಸಿಂಗ್ ನೋಡಿದ ಅಭಿಮಾನಿಗಳು ಖುಷಿಯಾದ್ರೆ, ಅವರ ಲುಕ್ ನೋಡಿ ಆಶ್ಚರ್ಯಗೊಂಡಿದ್ದಾರೆ.

ಕಪ್ಪು ಡ್ರೆಸ್ ಧರಿಸಿದ್ದ ಹನಿ ಸಿಂಗ್ ಹೊಸ ಹೇರ್ ಸ್ಟೈಲ್ ನಲ್ಲಿ ಪ್ರತ್ಯಕ್ಷರಾಗಿದ್ದರು. ಹಾಗೆ ಹನಿ ಸಿಂಗ್ ಸ್ವಲ್ಪ ದಪ್ಪಗಾಗಿದ್ದಾರೆ. ಸದ್ಯ ಪಂಜಾಬಿ ಚಿತ್ರ ‘ಚೋರಾವರ್’ ಚಿತ್ರದ ಬಿಡುಗಡೆ ತಯಾರಿಯಲ್ಲಿದ್ದಾರೆ. ಇದರ ಪ್ರಮೋಷನ್ ಗಾಗಿಯೇ ಅವರು ಕಾರ್ಯಕ್ರಮಕ್ಕೆ ಬಂದಿದ್ದರು. ಪಂಜಾಬಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಲು ಬಂದಿರುವೆ ಎಂದ ಹನಿ ಸಿಂಗ್, ಚಿತ್ರ ಮೇ 6 ರಂದು ಬಿಡುಗಡೆಯಾಗಲಿದೆ ಎಂದಿದ್ದಾರೆ.

ಬಾಲಿವುಡ್ ಸ್ಟಾರ್ ಶಾರುಖ್ ಜೊತೆ ಗಲಾಟೆ ನಡೆದಿದೆ ಎಂಬುದನ್ನು ನಿರಾಕರಿಸಿದ ಹನಿ ಸಿಂಗ್, ತಾವು ಯಾರ ಜೊತೆಯೂ ಗಲಾಟೆ ಮಾಡಿಕೊಂಡಿಲ್ಲ ಎಂದಿದ್ದಾರೆ. ಡ್ರಗ್ಸ್ ಸೇವಿಸುತ್ತಿದ್ದ ಹನಿ ಸಿಂಗ್ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ ಎಂಬ ಸುದ್ದಿಯೂ ಹರಡಿತ್ತು. ಅದೇನೇ ಇರಲಿ ಮತ್ತೆ ಹನಿ ಸಿಂಗ್ ಅಭಿಮಾನಿಗಳ ಮುಂದೆ ಕಾಣಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...