alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶದಲ್ಲಿ ಕೋಟಿ ಕೋಟಿ ಹೂಡಿಕೆ ಮಾಡಿದ್ದಾರೆ ಈ ಸ್ಟಾರ್ಸ್

ಬಾಲಿವುಡ್ ನಟ-ನಟಿಯರು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಆಸ್ತಿ ಹೊಂದಿದ್ದಾರೆ. ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಈಗ ದುಬೈನಲ್ಲಿ ಮನೆ ಖರೀದಿಸಲು ಮುಂದಾಗಿದ್ದಾರಂತೆ. ಸುಂದರವಾದ ಐಷಾರಾಮಿ ವಿಲ್ಲಾ ಕೊಂಡುಕೊಳ್ಳಲು ಅಗತ್ಯ ದಾಖಲೆಗಳನ್ನು ಕೂಡ ಸಲ್ಲಿಸಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್ ಗಳು ಈಗಾಗ್ಲೇ ಕೆಲವೊಂದು ಮನೆಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದು, ಏಕ್ತಾ ಅದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದಷ್ಟೇ ಬಾಕಿ. ನಟ ಅಕ್ಷಯ್ ಕುಮಾರ್ ಅಂಧೇರಿಯ ಲೋಖಂಡ್ವಾಲಾದಲ್ಲಿ ನಾಲ್ಕು ಫ್ಲಾಟ್ ಗಳನ್ನು ಖರೀದಿಸಿದ್ದಾರೆ.

ಜುಹು ಬೀಚ್ ಬಳಿ ಡುಪ್ಲೆಕ್ಸ್ ಹೌಸ್ ಕೂಡ ಹೊಂದಿದ್ದಾರೆ. ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ, ಅಕ್ಷಯ್ ಕುಮಾರ್ ಬಳಿ ಕೆನಡಾದ ಪೌರತ್ವ ಇದೆ. ಟೊರಾಂಟೋದಲ್ಲಿ ಸುಂದರವಾದ ಬಂಗಲೆಯನ್ನೂ ಹೊಂದಿದ್ದಾರೆ.

2007ರಲ್ಲೇ ನಟ ಶಾರುಖ್ ಖಾನ್ ದುಬೈನಲ್ಲಿ ಮನೆ ಖರೀದಿಸಿದ್ದರು. ಲಂಡನ್ ನ ಪಾರ್ಕ್ ಲೇನ್ ನಲ್ಲಿ ಕೂಡ ಕಿಂಗ್ ಖಾನ್ ಗೆ ಸೇರಿದ ಅತ್ಯಾಧುನಿಕ ಬಂಗಲೆ ಇದೆ. ಇನ್ನು ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ದಂಪತಿ ಸ್ವಿಡ್ಜರ್ಲೆಂಡ್ ನಲ್ಲಿ ಸ್ವಂತ ಮನೆ ಹೊಂದಿದ್ದಾರೆ.

ನಟ ಜಾನ್ ಅಬ್ರಾಹಂ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಮನೆ ಕೊಂಡುಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ದುಬೈನ ಬುರ್ಜ್ ಖಲೀಫಾದಲ್ಲಿ ಅತ್ಯಾಧುನಿಕ ಫ್ಲಾಟ್ ಹೊಂದಿದ್ದಾರೆ. ಲಂಡನ್ ನ ಆಕ್ಸ್ ಫರ್ಡ್ ಸ್ಟ್ರೀಟ್ ನಲ್ಲೂ ಶಿಲ್ಪಾ ಹಾಗೂ ರಾಜ್ ಕುಂದ್ರಾಗೆ ಸೇರಿದ ಮನೆ ಇದೆ.

ಇನ್ನು ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮುಂಬೈನಲ್ಲಿ ಕಡಿಮೆ ಅಂದ್ರೂ 5 ಮನೆಗಳನ್ನು ಹೊಂದಿದ್ದಾರೆ. ಪತ್ನಿ ಜಯಾ ಬಚ್ಚನ್ ಬಿಗ್ ಬಿ ಗೆ ಪ್ಯಾರಿಸ್ ನಲ್ಲಿ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಪಾಮ್ ಜುಮೀರಾದಲ್ಲೂ ಅಮಿತಾಭ್ ಮನೆ ಹೊಂದಿದ್ದಾರೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...