alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಸಿಬ್ಬಂದಿ ಸ್ಕರ್ಟ್ ಎತ್ತಿ ನೋಡ್ತಾನಂತೆ ಈ ನಟ

ನಟ ಕೆವಿನ್ ಸ್ಪೇಸಿ ನಂತ್ರ ಮತ್ತೊಬ್ಬ ಹಾಲಿವುಡ್ ನಟನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಮೂಲಗಳ ಪ್ರಕಾರ 80 ವರ್ಷದ ಮೋರ್ಗನ್ ಫ್ರೀಮನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. 8 ಮಹಿಳೆಯರು ಮೋರ್ಗನ್ ವಿರುದ್ಧ ಕಿರುಕುಳದ ಆರೋಪ ಹೊರಿಸಿದ್ದಾರೆ.

ಸಿ ಎನ್ ಎನ್, ಮೋರ್ಗನ್ ಜೊತೆ ಕೆಲಸ ಮಾಡಿದ 16 ಮಹಿಳೆಯರ ಜೊತೆ ಮಾತುಕತೆ ನಡೆಸಿದೆ. ಅದ್ರಲ್ಲಿ 8 ಮಹಿಳೆಯರು ಆರೋಪ ಹೊರಿಸಿದ್ದಾರೆ. ಮೋರ್ಗನ್ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ. ಡ್ರೆಸ್, ದೇಹದ ಬಗ್ಗೆ ಅಶ್ಲೀಲ ಕಮೆಂಟ್ ಮಾಡುತ್ತಿದ್ದ ಎಂದು ಮಹಿಳೆಯರು ದೂರಿದ್ದಾರೆ.

ಫ್ರೀಮನ್ ಮಹಿಳೆಯ ಸ್ಕರ್ಟ್ ಎತ್ತುತ್ತಾನಂತೆ. ಒಳ ಉಡುಪು ಧರಿಸಿದ್ದೀಯಾ ಎಂದು ಕೇಳುತ್ತಾನಂತೆ. ಕಳೆದ 10 ವರ್ಷಗಳಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾನೆಂದು ನಾಲ್ವರು ಮಹಿಳೆಯರು ಆರೋಪ ಮಾಡಿದ್ದಾರೆ. ಮಹಿಳೆಯರ ಖಾಸಗಿ ಅಂಗವನ್ನು ಕೆಟ್ಟದಾಗಿ ನೋಡುತ್ತಿದ್ದ ನಟ ಇಂಟರ್ನಿಗಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದನಂತೆ.

ಫೀಮನ್ ದಿವಂಗತ ಮೊಮ್ಮಗಳು ಕೂಡ ಅಜ್ಜನ ವಿರುದ್ಧ ಲೈಂಗಿಕ ಆರೋಪ ಹೊರಿಸಿದ್ದಳು. 2015ರಲ್ಲಿ ಆಕೆ ಹತ್ಯೆ ನಡೆದ ನಂತ್ರ ಈ ಪ್ರಕರಣ ಮುಚ್ಚಿಹೋಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...