alex Certify
ಕನ್ನಡ ದುನಿಯಾ       Mobile App
       

Kannada Duniya

ಹೀನಾ ನೀ ಮಾಡಿದ್ದು ಸರೀನಾ ಅಂತಿದ್ದಾರೆ ನೆಟ್ಟಿಗರು, ಕಾರಣ ಏನು ಗೊತ್ತಾ…?

ಹಿಂದಿ ಸೀರಿಯಲ್ ನ ಸ್ಟಾರ್ ನಟಿ ಹೀನಾ ಖಾನ್ ಗೋವಾದಲ್ಲಿದ್ದಾರೆ. ಗೋವಾದ ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಗೋವಾದ ಸುಂದರ ಕ್ಷಣಗಳ ಒಂದಷ್ಟು ಫೋಟೋಗಳನ್ನ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹೀನಾಖಾನ್ ಪೋಸ್ಟ್ ನೋಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಹೀನಾ ವಿರುದ್ಧ ಕೆಂಡಾಮಂಡಲರಾಗಿಬಿಟ್ಟಿದ್ದಾರೆ. ಇಂತಾ ಚಿತ್ರಗಳನ್ನ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ನೀವು ಒಬ್ಬ ಅತ್ಯುತ್ತಮ ನಟಿಯಾಗಿರಬಹುದು. ಆದ್ರೆ ಧರ್ಮಕ್ಕೆ ಮರ್ಯಾದೆ ತರುವಂತಾ ಕೆಲಸವನ್ನ ಮಾಡಿ ಅಂತ ಕೆಲವರು ಕಾಮೆಂಟ್ ಮಾಡಿದ್ದಾರೆ. ಕೆಲ ಟ್ರೋಲರ್ ಗಳಿಗೂ ಹೀನಾಖಾನ್ ರ ಗೋವಾ ಫೊಟೋಗಳು ಆಹಾರವಾಗಿಬಿಟ್ಟಿದೆ.

ಆದ್ರೆ ಕೆಲವರು ಹೀನಾ ಪರ ನಿಂತಿದ್ದಾರೆ. ಧಾರ್ಮಿಕ ವಿಚಾರಗಳನ್ನ ಟ್ರೋಲ್ ಮಾಡದಂತೆ ಕಾಮೆಂಟ್ ಮಾಡಿದ್ದಾರೆ. ರಂಜಾನ್ ಸಂದರ್ಭದಲ್ಲೂ ಹೀನಾ ಧರಿಸಿದ್ದ ಬಟ್ಟೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಮತ್ತೆ ಅಂತದ್ದೇ ಸನ್ನಿವೇಶ ರಿಪೀಟ್ ಆಗಿದೆ. ಹೀನಾ ಟೈಮ್ ಖರಾಬ್ ಆಗಿದ್ಯೋ ಏನೋ..?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...