alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಸುದ್ದಿಯಾದಳು ಹೀನಾ ಖಾನ್…!

ಬಿಗ್ಬಾಸ್ 11 ರ ಕಂಟೆಸ್ಟೆಂಟ್ ಹೀನಾ ಖಾನ್ ಮತ್ತೆ ಟ್ರೋಲ್ಗಳಿಂದ ಛೀಮಾರಿ ಹಾಕಿಸಿಕೊಂಡಿದ್ದಾಳೆ.  ವೆಕೇಷನ್ ಗಳಿಂದ, ಕೆಲಕಾಲ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಿಂದ ಹೀನಾ ಖಾನ್ ಪ್ರತಿ ವಾರವೂ ಸುದ್ದಿಯಲ್ಲಿರ್ತಾಳೆ.

ಸದಾ ಟ್ರೋಲ್ಗಳಿಗೆ ಒಳ್ಳೆಯ ಆಹಾರವಾಗ್ತಿದ್ರು ಕ್ಯಾರೆ ಎನ್ನದ ಹೀನಾ ಈಗ ಮತ್ತೊಮ್ಮೆ ಟ್ರೋಲ್ಗಳ ಬಾಯಿಗೆ ಸಿಕ್ಕಿದ್ದಾಳೆ. ಕ್ಯಾನ್ಸರ್ ಪೀಡಿತ ಮಕ್ಕಳ ಸಮಾರಂಭವೊಂದರಲ್ಲಿ ಕಾಣಿಸಿಕೊಂಡಿದ್ದ ಫೊಟೋ ಒಂದನ್ನ ಹೀನಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಆ ಫೋಟೋವನ್ನ ನೋಡಿದ ಟ್ರೋಲಿಗರು ಹೀನಾಗೆ ಕ್ಲಾಸ್ ತೆಗೆದುಕೊಳ್ಳೋದಕ್ಕೆ ಶುರುಮಾಡಿದ್ದಾರೆ. ಮಕ್ಕಳ ಸಮಾರಂಭದಲ್ಲಿ ಭಾಗವಹಿಸಿದ್ದೀಯಾ ನಿನಗೆ ಎಂತಾ ಬಟ್ಟೆ ತೊಡಬೇಕು ಅನ್ನೋ ಕಾಮನ್ ಸೆನ್ಸ್ ಇಲ್ವಾ ಅಂತ ನೆಟ್ಟಿಗರಿಂದ ಟೀಕೆ ಮಾಡೋಕೆ ಶುರುಮಾಡಿದ್ದಾರೆ.

ಮಕ್ಕಳ ಸಮಾರಂಭದಲ್ಲಿ ಹೀನಾ ಶ್ವೇತ ವರ್ಣದ ಸೆಮಿ ಆಫ್ ಶೋಲ್ಡರ್ ಟಾಪ್ ಧರಿಸಿ ಜೀನ್ಸ್ ಧರಿಸಿದ್ದರು. ಹೀನಾ ವಸ್ತ್ರ ಸಂಹಿತೆಯನ್ನ ಭಾರೀ ಟೀಕೆಗೆ ಒಳಪಡಿಸಿದ ನೆಟ್ಟಿಗರು ಆಕೆಯನ್ನ ಕಳೆದ ಎರಡು ದಿನಗಳಿಂದ ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...