alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯರಾತ್ರಿ ಮಹೂರ್ತದಲ್ಲಿ ಮದುವೆಯಾದ ಹಿಮೇಶ್ ರೇಷಮಿಯಾ

ಸೋನಮ್ ಕಪೂರ್, ನೇಹಾ ಧೂಪಿಯಾ ವಿವಾಹದ ನಂತರ ಇದೀಗ ಹಿಮೇಶ್ ರೇಷಮಿಯಾ ಸರದಿ. ಸಿಂಗರ್ ಮತ್ತು ನಟ ಹಿಮೇಶ್ ತಮ್ಮ ಬಹುಕಾಲದ ಗೆಳತಿ, ಕಿರುತೆರೆ ನಟಿ ಸೋನಿಯಾ ಕಪೂರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಹಿಮೇಶ್ ನಿವಾಸದಲ್ಲಿ ನಡೆದ ಸರಳ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಹತ್ತಿರದ ಸ್ನೇಹಿತರಿಗೆ ಮಾತ್ರ ಅಹ್ವಾನಿಸಲಾಗಿತ್ತು.

ಸೋನಿಯಾ ಮತ್ತು ತಾನು ಕಳೆದ 10 ವರ್ಷಗಳಿಂದ ಪರಿಚಿತರು. ಆದ್ರೆ ನಮ್ಮ ಮದುವೆ ಕೊನೆ ಕ್ಷಣದ ನಿರ್ಧಾರವಾಗಿತ್ತು. ಜೊತೆಗೆ ಮದುವೆ ಮಹೂರ್ತ ಕೂಡಾ ರಾತ್ರಿ 1.30 ಕ್ಕಿದ್ದರಿಂದ ಯಾರನ್ನೂ ಆಹ್ವಾನಿಸಲಾಗಿಲ್ಲ. ಹೀಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿಕೊಂಡು ಎಲ್ಲರಿಗೂ ಅಹ್ವಾನಿಸಬೇಕು ಅಂದುಕೊಂಡಿದ್ದೇವೆ ಅಂತಾ ಹಿಮೇಶ್ ತಿಳಿಸಿದ್ದಾರೆ.

ಹಿಮೇಶ್ ರೇಷಮಿಯಾಗೆ ಇದು ಎರಡನೇ ಮದುವೆ. 2017 ರಲ್ಲಿ ಮೊದಲ ಪತ್ನಿ ಕೋಮಲ್ ಗೆ ವಿಚ್ಛೇದನ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಮೇಶ್, ನಾವಿಬ್ಬರು ಪರಸ್ಪರ ಒಪ್ಪಿಕೊಂಡು ವಿಚ್ಛೇದನ ತೆಗೆದುಕೊಂಡಿದ್ದೇವೆ. ಇದಕ್ಕೆ ನಮ್ಮ ಕುಟುಂಬಸ್ಥರ ಸಹಮತವೂ ಇದೆ. ಆದ್ರೆ ಕೋಮಲ್ ಎಂದಿಗೂ ನಮ್ಮ ಕುಟುಂಬದ ಸದಸ್ಯೆ. ಜೊತೆಗೆ ನಮಗೆ ಒಬ್ಬ ಮಗ ಕೂಡಾ ಇದ್ದಾನೆ ಅಂತಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...