alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಿಗ್ ಬಾಸ್’ ಮನೆಯಲ್ಲಿ ಹೊಡಿ ಬಡಿ ಆಟ..!

big-boss

ಲಕ್ಷುರಿ ಬಜೆಟ್ ನ ಆಟ ‘ಬಿಗ್ ಬಾಸ್’ ಮನೆಯನ್ನು ರಣರಂಗ ಮಾಡ್ಬಿಟ್ಟಿದೆ. ಒಂದ್ಕಡೆ ದುಡ್ಡಿನ ಲೆಕ್ಕಾಚಾರ, ಇನ್ನೊಂದ್ಕಡೆ ತಮ್ಮ ತಮ್ಮ ಏರಿಯಾಗಳನ್ನು ಕಾಪಾಡಿಕೊಳ್ಳೋ ಧಾವಂತ. ಇದರ ಮಧ್ಯೆ ಎರಡು ಮೂರು ಕಿತ್ತಾಟಗಳು ನಡೆದು ಹೋಗಿವೆ. ಬೋರ್ಡ್ ಕದಿಯೋ ಸಾಹಸದಲ್ಲಿ ಓಂ ಪ್ರಕಾಶ್ ಹಾಗೂ ಶಾಲಿನಿ ಮಧ್ಯೆ ಭರ್ಜರಿ ಜಟಾಪಟಿ ನಡೀತು.

ಓಂ ಪ್ರಕಾಶ್ ಶಾಲಿನಿ ಕೆನ್ನೆಗೆ ಲೈಟಾಗಿ ಬಾರಿಸಿಬಿಟ್ಟಿದ್ದಾರೆ ಅನ್ನೋದು ನಿರಂಜನ್ ದೇಶಪಾಂಡೆ ಆರೋಪ. ಇದನ್ನು ಕೇಳಿ ರಾಂಗಾದ ಓಂಪ್ರಕಾಶ್, ಸುಳ್ಳು ಹೇಳಿದ್ರೆ ತುಳಿದು ಹಾಕ್ಬಿಡ್ತೀನಿ ಅಂತೆಲ್ಲಾ ಕೂಗಾಡಿಬಿಟ್ರು. ನಂತರ ಶಾಲಿನಿಯನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದು, ಅವರ ಕಣ್ಣೀರ ಕೋಡಿ ಎಲ್ಲವೂ ನಡೆದುಹೋಯ್ತು. ಹುಡುಗರ ತಂಡ ಕಿಚನ್ ಏರಿಯಾವನ್ನು ಅಕ್ರಮವಾಗಿ ವಶಪಡಿಸಿಕೊಂಡಿದೆ ಅನ್ನೋ ಸಿಟ್ಟಲ್ಲಿ ಹುಡುಗಿಯರು ಅಲ್ಲಿದ್ದ ಸಾಮಾನುಗಳನ್ನೆಲ್ಲ ಹೊತ್ಕೊಂಡು ಹೋದ್ರು. ಇದೇ ಗ್ಯಾಪಲ್ಲಿ ಶಾಲಿನಿಗೂ ನಿರಂಜನ್ ಗೂ ತಕರಾರು ನಡೀತು. ಕ್ಯಾಪ್ಟನ್ ಕಾವ್ಯಾ ಮೇಲೂ ರೇಗಿದ್ದ ಶಾಲಿನಿ ಕೊನೆಗೆ ಕ್ಷಮೆ ಕೇಳಿದ್ರು.

ಈ ಎಪಿಸೋಡ್ ನ ದೊಡ್ಡ ಹೈಡ್ರಾಮಾ ಅಂದ್ರೆ ಶಾಲಿನಿ ಹಾಗೂ ಪ್ರಥಮ್ ನಡುವಣ ಬಡಿದಾಟ. ಬಾತ್ ರೂಮ್ ಏರಿಯಾದ ಬೋರ್ಡ್ ಕಿತ್ತುಕೊಳ್ಳುವ ಭರದಲ್ಲಿ ಯಾರು ಯಾರಿಗೆ ಹೊಡೆದ್ರೋ, ತಳ್ಳಿದ್ರೋ ಒಂದೂ ಗೊತ್ತಾಗಲಿಲ್ಲ. ಶಾಲಿನಿಗೆ ಮಾತ್ರ ತುಟಿ ಒಡೆದು ರಕ್ತ ಸೋರಲು ಶುರುವಾಗಿತ್ತು. ಕೂಡಲೇ ‘ಬಿಗ್ ಬಾಸ್’ ಮನೆಗೆ ಬಂದ ವೈದ್ಯರು ಚಿಕಿತ್ಸೆ ಕೊಟ್ರು. ಪ್ರಥಮ್ ನನಗೆ ಹೊಡೆದ ಅಂತಾ ಶಾಲಿನಿ ಕಣ್ಣೀರು ಹಾಕ್ತಿದ್ದಾರೆ, ನಾನ್ ದೇವ್ರಾಣೆ ಹೊಡೆದಿಲ್ಲ ಅಂತಾ ಪ್ರಥಮ್ ಸಮರ್ಥಿಸಿಕೊಳ್ತಿದ್ದಾನೆ. ಇಬ್ಬರಲ್ಲಿ ತಪ್ಯಾರದ್ದು ಅನ್ನೋದನ್ನು ‘ಬಿಗ್ ಬಾಸ್’ ತೀರ್ಮಾನ ಮಾಡ್ಬೇಕಷ್ಟೆ.

ದುಡ್ಡಿಗಾಗಿ ರೇಖಾ ಹಾಗೂ ಮೋಹನ್ ಮಧ್ಯೆ ಕೂಡ ಬಿಸಿ ಬಿಸಿ ಮಾತುಕತೆ ನಡೆದಿದೆ. ಮೂರು ದಿನಗಳಿಂದ ಸರಿಯಾಗಿ ಊಟವಿಲ್ಲ, ಹೊತ್ಹೊತ್ತಿಗೆ ಬಾತ್ ರೂಮಿಗೆ ಹೋಗೋಕಾಗ್ತಿಲ್ಲ. ಇದೇ ಸಿಟ್ಟಲ್ಲೋ ಏನೋ ಹೊಡೆದಾಟ, ಜಗಳ ಎಲ್ಲವೂ ತಾರಕಕ್ಕೇರಿದೆ. ಇನ್ನೊಂದ್ಕಡೆ ಕೀರ್ತಿ ಹಾಗೂ ಮಾಳವಿಕ ಕನ್ಫೆಷನ್ ರೂಮ್ ವಶಪಡಿಸಿಕೊಳ್ಳಲು ಅಲ್ಲೇ ಕಾದು ಕೂತಿದ್ದಾರೆ. ಬಾತ್ ರೂಮಿನಲ್ಲಿ ನಡೆದ ಹೈಡ್ರಾಮಾ ನೋಡೋ ಚಾನ್ಸ್ ಅವರ ಕೈತಪ್ಪಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...