alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಿತ್ರದಲ್ಲಿ 130 ಡ್ರೆಸ್ ಧರಿಸಿ ದಾಖಲೆ ಬರೆದಿದ್ಲು ಕರೀನಾ

ಬಾಲಿವುಡ್ ನಟಿ ಕರೀನಾ ಕಪೂರ್ ಕೆಲ ದಿನಗಳ ಹಿಂದಷ್ಟೆ ‘ವೀರ್ ದಿ ವೆಡ್ಡಿಂಗ್’ ಚಿತ್ರದ ಮೂಲಕ ಬಾಲಿವುಡ್ ಗೆ ವಾಪಸ್ ಆಗಿದ್ದಾರೆ. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಂಥ ಗಳಿಕೆ ಕಂಡಿಲ್ಲ. ಆದ್ರೆ ಕರೀನಾ ಬೇಡಿಕೆ ಕಡಿಮೆಯಾಗಿಲ್ಲ. ಕರೀನಾ ಕೈಗೆ ಮೂರು ಚಿತ್ರಗಳು ಬಂದಿವೆ. ಕರೀನಾ ಎರಡು ಚಿತ್ರಗಳನ್ನು ಫೈನಲ್ ಮಾಡಿದ್ದಾಳೆ. ಕರಣ್ ಜೋಹರ್ ನಿರ್ದೇಶನದ ಗುಡ್ ನ್ಯೂಸ್ ಹಾಗೂ ತಖ್ತ್ ಚಿತ್ರದಲ್ಲಿ ಕರೀನಾ ನಟಿಸಲಿದ್ದಾಳೆ.

40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕರೀನಾ ಕಪೂರ್ ಖಾನ್ ಸಾಕಷ್ಟು ಸಿನಮಾಗಳು ದಾಖಲೆ ಮಾಡಿವೆ. ಆದ್ರೆ ವಿಚಿತ್ರ ದಾಖಲೆಯೊಂದು ಕರೀನಾ ಹೆಸರಿನಲ್ಲಿದೆ. ಕರೀನಾ 2012ರಲ್ಲಿ ನಟಿಸಿದ್ದ ಹಿರೋಯಿನ್ ಚಿತ್ರದಲ್ಲಿ 130 ಡ್ರೆಸ್ ಧರಿಸಿದ್ದಳಂತೆ. ವಿಶ್ವದ ಪ್ರಸಿದ್ಧ ವಿನ್ಯಾಸಕರು ತಯಾರಿಸಿದ ಡ್ರೆಸ್ ಧರಿಸಿದ್ದಳಂತೆ.

ಮಧುರ್ ಭಂಡಾರ್ಕರ್ ಚಿತ್ರದಲ್ಲಿ ಕರೀನಾ, ಮಾಹಿ ಅರೋರಾ ಪಾತ್ರದಲ್ಲಿ ನಟಿಸಿದ್ದಳು. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯಲಿಲ್ಲ. ಆದ್ರೆ ಕರೀನಾ ಅತಿ ಹೆಚ್ಚು ಡ್ರೆಸ್ ಧರಿಸಿ ದಾಖಲೆ ಬರೆದಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...