alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಪಾಶಾ ಮದುವೆ ಬಗ್ಗೆ ಮಾಜಿ ಪ್ರಿಯಕರ ಹೇಳಿದ್ದೇನು..?

harman-baweja

ಬಾಲಿವುಡ್ ಬೆಡಗಿ ಬಿಪಾಶಾ ಬಸು ಹಾಗೂ ನಟ ಕರಣ್ ಸಿಂಗ್ ಗ್ರೋವರ್ ಪ್ರೀತಿಸುತ್ತಿದ್ದು, ಏಪ್ರಿಲ್ 30 ರಂದು ಮದುವೆಯಾಗಲಿದ್ದಾರೆ. ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯುವ ಅದ್ಧೂರಿ ಮದುವೆಯಲ್ಲಿ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ.

ಕರಣ್ ಸಿಂಗ್ ಗ್ರೋವರ್ ಗೆ ಇದು ಮೂರನೇ ಮದುವೆ. ಹಿಂದೆಯೇ ಇಬ್ಬರನ್ನು ಮದುವೆಯಾಗಿ ಅವರಿಂದ ದೂರವಾಗಿದ್ದಾರೆ. ಆದರೆ, ಬಿಪಾಶಾಗೆ ಇದು ಮೊದಲ ಮದುವೆ. ಮೊದಲ ಮದುವೆಯಾದರೇನಂತೆ. ಬಿಪಾಶಾ ಹಿಂದೆ ಖ್ಯಾತ ಬಾಲಿವುಡ್ ನಟ ಜಾನ್ ಅಬ್ರಹಾಂರೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದರು. ಕೆಲ ವರ್ಷಗಳ ಬಳಿಕ ಜಾನ್ ಅಬ್ರಹಾಂ ಅವರಿಂದ ದೂರವಾದ ಬಿಪಾಶಾ, ಹರ್ಮನ್ ಬವೇಜಾ ಅವರೊಂದಿಗೆ ಸುತ್ತಾಟ ನಡೆಸಿದ್ದರು.

ಇದೀಗ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಬಿಪಾಶಾ ಮದುವೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಬಿಪಾಶಾ ಮಾಜಿ ಪ್ರಿಯಕರ ಹರ್ಮನ್ ಬವೇಜಾ, ಮದುವೆಯಾಗುತ್ತಿರುವ ಬಾಲಿವುಡ್ ಜೋಡಿಗಳಿಗೆ ಶುಭವಾಗಲಿ. ಅವರಿಬ್ಬರೂ ಸಂತಸದಿಂದ ಇರಲಿ ಎಂದು ಹಾರೈಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...