alex Certify
ಕನ್ನಡ ದುನಿಯಾ       Mobile App
       

Kannada Duniya

ನಟ ರಣವೀರ್ ಸಿಂಗ್ ಕದ್ದು ಮುಚ್ಚಿ ಮಾಡಿದ್ದೇನು..?

ranveer singh 23344ಚಲನಚಿತ್ರ ತಾರೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಜೊತೆಗೆ ಪಾತ್ರಕ್ಕೆ ತಕ್ಕಂತೆ ತಮ್ಮ ತೂಕವನ್ನು ಹೆಚ್ಚು, ಕಡಿಮೆ ಮಾಡಿಕೊಳ್ಳುವುದಕ್ಕೂ ತಯಾರಿರುತ್ತಾರೆ. ಅದರಲ್ಲೂ ನಾಯಕ ನಟರು ಕಟ್ಟುಮಸ್ತಾದ ದೇಹ ಹೊಂದುವುದಕ್ಕೆ ಒತ್ತು ನೀಡುತ್ತಾರೆ.

ಇದಕ್ಕಾಗಿ ಸಾಕಷ್ಟು ಕಸರತ್ತು ನಡೆಸುವ ಇವರುಗಳು ತರಬೇತಿಗೆಂದು ಸೂಕ್ತ ವ್ಯಕ್ತಿಗಳನ್ನು ನೇಮಿಸಿಕೊಂಡಿರುತ್ತಾರೆ. ಅಲ್ಲದೇ, ಅವರು ನೀಡುವ ಸಲಹೆ- ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಲು ಮುಂದಾಗುತ್ತಾರೆ. ಇದಕ್ಕಾಗಿ ತಮಗೆ ಇಷ್ಟವಿದ್ದರೂ ಹಲವು ಆಹಾರ ಪದಾರ್ಥಗಳನ್ನು ಅವರುಗಳು ತ್ಯಜಿಸುತ್ತಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋವೊಂದು ನೋಡುಗರಲ್ಲಿ ನಗೆ ಉಕ್ಕಿಸುತ್ತದೆ. ‘ಬಾಜಿರಾವ್ ಮಸ್ತಾನಿ’ ಯಶಸ್ಸಿನ ಬಳಿಕ ವಾಣಿ ಕಪೂರ್ ಜೊತೆಗಿನ ‘ಬೇಫಿಕ್ರೆ’ ಚಿತ್ರದಲ್ಲಿ ಬ್ಯುಸಿಯಾಗಿರುವ ರಣವೀರ್ ಸಿಂಗ್, ತಮ್ಮ ಫಿಟ್ನೆಸ್ ತರಬೇತುದಾರನ ಸಲಹೆಯನ್ನು ಧಿಕ್ಕರಿಸಿ ತಮಗಿಷ್ಟವಾದ ತಿನಿಸನ್ನು ಕದ್ದು ಮುಚ್ಚಿ ತಿನ್ನಲು ಹೋಗಿ ಆತನ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದನ್ನು ಕಂಡ ಆತ ಹೊಡೆಯುವವನಂತೆ ಹುಸಿ ಮುನಿಸು ತೋರಿದ್ದು, ಆ ಫೋಟೋವೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...