alex Certify
ಕನ್ನಡ ದುನಿಯಾ       Mobile App
       

Kannada Duniya

ರಣವೀರ್​ ಹುಟ್ಟುಹಬ್ಬದಂದು ದೀಪಿಕಾ ಹೇಳಿದ್ದೇನು?

ಬಾಲಿವುಡ್​ ಸ್ಟಾರ್​ ನಟ ರಣವೀರ್​ ಸಿಂಗ್​​ ಬುಧವಾರ ತಮ್ಮ 33ನೇ ಹುಟ್ಟು ಹಬ್ಬ ಆಚರಿಸಿಕೊಂಡ್ರು. ಈ ನಟನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ರಣವೀರ್​​ ಸಿಂಗ್ ​​ರ ಹುಟ್ಟು ಹಬ್ಬಕ್ಕೆ ದೀಪಿಕಾ ಪಡುಕೋಣೆ ಸಹ ವಿಶ್​ ಮಾಡಿದ್ರು.

ಇನ್ನು ದೀಪಿಕಾ ಇನ್ಸ್ಟಾಗ್ರಾಂ ನಲ್ಲಿ ಹ್ಯಾಪಿಯಾಗಿ ಡ್ಯಾನ್ಸ್​ ಮಾಡುವ ವಿಡಿಯೋ ಅಪ್​​ಲೋಡ್​ ಮಾಡಿದ್ದರು. ಕೆಳಗೆ ಹೇ ಹಾಟಿ ಇಂದು ನಿನ್ನ ಬರ್ತಡೆ ಎಂದು ಬರೆದಿದ್ದರು.

ಈ ಇಬ್ಬರು ಸ್ಟಾರ್​ಗಳ ನಡುವೆ ಪ್ರೀತಿ ಬೆಳೆದಿದೆ. ಅಲ್ಲದೆ ಈ ವರ್ಷದ ಕೊನೆಯಲ್ಲಿ ಸಪ್ತಪದಿ ತುಳಿಯಲಿದ್ದಾರೆ ಎಂಬ ಗುಸು ಗುಸು ಸಹ ಬಿ ಟೌನ್​​ನಲ್ಲಿ ಹರಡಿದೆ. ಆದ್ರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರೂ ತುಟಿ ಬಿಚ್ಚಿಲ್ಲ.

ರಣವೀರ್​​ ಸದ್ಯ ‘ಸಿಂಬಾ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತಮ್ಮ ಹುಟ್ಟು ಹಬ್ಬವನ್ನು ರಣವೀರ್​ ಸೆಟ್​​ನಲ್ಲಿ ಆಚರಿಸಿಕೊಂಡಿದ್ದಾರೆ. ಸಿಂಬಾ ಚಿತ್ರದಲ್ಲಿ ಸಾರಾ ಅಲಿ ಖಾನ್​ ಹಾಗೂ ಸೋನು ಸೂದ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಗೋವಾ, ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಡಿಸೆಂಬರ್​ 28 ಕ್ಕೆ ಬಿಡುಗಡೆಯಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...