alex Certify
ಕನ್ನಡ ದುನಿಯಾ       Mobile App
       

Kannada Duniya

70 ಕೋಟಿ ರೂ. ಮೌಲ್ಯದ ಭೂಮಿಯನ್ನು 1.75 ಲಕ್ಷಕ್ಕೆ ಪಡೆದ ಹೇಮಾಮಾಲಿನಿ

hema-malini-78554ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ತಮ್ಮ ಡ್ಯಾನ್ಸ್ ಆಕಾಡೆಮಿಗಾಗಿ ಮುಂಬೈನ ಓಹೀಶ್ವರದಲ್ಲಿ ಸುಮಾರು 70 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 1.75 ಲಕ್ಷ ರೂ. ಗಳಿಗೆ ಪಡೆದುಕೊಂಡಿರುವ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ, ಹೇಮಾಮಾಲಿನಿಯವರಿಗೆ 2 ಸಾವಿರ ಚದರ ಮೀಟರ್ ವಿಸ್ತೀರ್ಣದ ಭೂಮಿಯನ್ನು ನೀಡಿರುವುದರ ಕುರಿತು ಮಾಹಿತಿ ಕೇಳಿದ್ದು, ಅವರಿಗೆ ಸಿಕ್ಕ ವಿವರದ ಪ್ರಕಾರ ಪ್ರತಿ ಚದರ ಮೀಟರ್ ಗೆ ಕೇವಲ 87.50 ರೂ. ಗಳನ್ನು ಪಡೆಯಲಾಗಿದೆ.

2000 ಚದರ ಮೀಟರ್ ವಿಸ್ತೀರ್ಣದ ಈ ಭೂಮಿಯ ಮಾರುಕಟ್ಟೆ ಮೌಲ್ಯ 70 ಕೋಟಿ ರೂ. ಗಳೆಂದು ಹೇಳಲಾಗಿದ್ದು, ಈ ಜಾಗಕ್ಕಾಗಿ ಹೇಮಾಮಾಲಿನಿಯವರು ಮುಂಗಡವಾಗಿ 10 ಲಕ್ಷ ರೂ. ಗಳನ್ನು ಪಾವತಿಸಿದ್ದು, 1.75 ಲಕ್ಷ ರೂ. ಪಡೆದುಕೊಂಡು ಉಳಿದ 8.25 ಲಕ್ಷ ರೂ.ಗಳನ್ನು ಮರಳಿಸಿರುವುದೂ ಮಾಹಿತಿಯಲ್ಲಿ ಬಹಿರಂಗವಾಗಿದೆ. ಈ ಜಾಗದಲ್ಲಿ ಹೇಮಾಮಾಲಿನಿಯವರ ನಾಟ್ಯ ವಿಹಾರ ಕಲಾಕೇಂದ್ರ ಚಾರಿಟಿ ಟ್ರಸ್ಟ್ ವತಿಯಿಂದ ನೃತ್ಯಾಲಯವನ್ನು ನಿರ್ಮಿಸಲಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...