alex Certify
ಕನ್ನಡ ದುನಿಯಾ       Mobile App
       

Kannada Duniya

ಮಲೈಕಾ ಹಲೋ..ಹಲೋ ಸಾಂಗ್ ಗೆ ಅಭಿಮಾನಿಗಳು ಫಿದಾ

`ಆಜಾ, ನೆಟ್ವರ್ಕ್ ಕೆ  ಬೀತರ್ ಕಹಕೆ ಹಲೋ ಹಲೋ’…ಹಾಡು ಯುಟ್ಯೂಬ್ ನಲ್ಲಿ ಧಮಾಲ್ ಮಾಡ್ತಿದೆ. ವಿಶಾಲ್ ಭಾರದ್ವಾಜ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡನ್ನು ರೇಖಾ ಭಾರದ್ವಾಜ್ ಹಾಡಿದ್ದಾರೆ. ರೇಖಾ ಮಾದಕ ಧ್ವನಿಯಲ್ಲಿ ಮೂಡಿ ಬಂದ ಹಾಡಿಗೆ ಹೆಜ್ಜೆ ಹಾಕಿದ್ದು ಡಾನ್ಸಿಂಗ್ ಕ್ವೀನ್ ಮಲೈಕಾ ಅರೋರಾ.

ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ ಮಾಡಿರುವ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಾಲ್ಕೈದು ದಿನಗಳ ಹಿಂದೆ ತೆರೆಕಂಡ ಹಾಡನ್ನು ಇಲ್ಲಿಯವರೆಗೆ 1 ಕೋಟಿ 19 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಪಟಾಖಾ ಚಿತ್ರದ ಹಾಡು ಇದಾಗಿದೆ. ಪಟಾಖಾ ಸದಾ ಜಗಳವಾಡುವ ಇಬ್ಬರು ಸಹೋದರಿಯರ ಕಥೆಯಾಗಿದೆ.

ದಂಗಲ್ ಗರ್ಲ್ ಸಾನ್ಯಾ ಹಾಗೂ ಟಿವಿ ನಟಿ ರಾಧಿಕಾ ಮದನ್ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶಾಲ್ ಭಾರಾದ್ವಾಜ್ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್ 28 ರಂದು ತೆರೆಗೆ ಬರಲಿದೆ. 20 ವರ್ಷಗಳ ಹಿಂದೆ ಬಾಲಿವುಡ್ ಐಟಂ ಹಾಡಿಗೆ ಮೊದಲ ಬಾರಿ ಹೆಜ್ಜೆ ಹಾಕಿದ್ದ ಮಲೈಕಾ ಈಗ್ಲೂ ಅದೇ ರೀತಿ ಡಾನ್ಸ್ ಮಾಡಿದ್ದಾಳೆ. ಮಲೈಕಾ ಫಿಟ್ನೆಸ್ ಹಾಗೂ ಡಾನ್ಸ್ ಅಭಿಮಾನಿಗಳ ಮನಸ್ಸು ಕದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...