alex Certify
ಕನ್ನಡ ದುನಿಯಾ       Mobile App
       

Kannada Duniya

‘ಹೆಬ್ಬುಲಿ’ 100 ಕೋಟಿ ರೂ. ಕಲೆಕ್ಷನ್: ರಕ್ಷಿತ್ ಶೆಟ್ಟಿ ವಿಶ್ವಾಸ

hebuli-raxit

ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಅಬ್ಬರಕ್ಕೆ ದಾಖಲೆಗಳೆಲ್ಲಾ ಧೂಳಿಪಟವಾಗುವ ಲಕ್ಷಣ ಕಾಣುತ್ತಿವೆ. ಬಿಡುಗಡೆಯಾದ 4 ದಿನಗಳಲ್ಲೇ ಸುಮಾರು 25 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ‘ಹೆಬ್ಬುಲಿ’ ವಾರದ ಗಳಿಕೆಯಲ್ಲೂ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.

ಮಾತ್ರವಲ್ಲ, ‘ಹೆಬ್ಬುಲಿ’ 100 ಕೋಟಿ ರೂ. ಗಳಿಸಲಿದೆ ಎಂದು ಖ್ಯಾತ ನಟ ರಕ್ಷಿತ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಹೆಬ್ಬುಲಿ’ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದು, ಇದು 100 ಕೋಟಿ ರೂ. ಗಳಿಸುವ ಮೊದಲ ಕನ್ನಡ ಚಿತ್ರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಹೆಬ್ಬುಲಿ’ ಬಿಡುಗಡೆಯಲ್ಲೂ ದಾಖಲೆ ಬರೆದಿದೆ. ಬಿಡುಗಡೆಯಾದ ಥಿಯೇಟರ್ ಸಂಖ್ಯೆ, ಪ್ರದರ್ಶನ ಮತ್ತು ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದು, ಮೊದಲ ದಿನದಿಂದಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ರಜೆಗಳಿದ್ದ ಕಾರಣ, ಪ್ರೇಕ್ಷಕರು ಮುಗಿಬಿದ್ದು, ಚಿತ್ರ ವೀಕ್ಷಿಸಿದ್ದಾರೆ. ‘ಹೆಬ್ಬುಲಿ’ ಓಟ ಹೀಗೆಯೇ ಮುಂದುವರೆದಲ್ಲಿ 100 ಕೋಟಿ ರೂ. ಗಳಿಸುವುದಂತೂ ಗ್ಯಾರಂಟಿ ಎಂಬ ಮಾತುಗಳು ಕೇಳಿ ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...