alex Certify
ಕನ್ನಡ ದುನಿಯಾ       Mobile App
       

Kannada Duniya

”ಆರಂಭದಲ್ಲಿ ಪುರುಷರ ಜೊತೆ ಮಲಗುವ ಕೆಲ ನಟಿಯರು ಆಮೇಲೆ ಹೇಳ್ತಾರೆ..!?”

ಶೋಷಣೆಯ ವಿಚಾರದ ಬಗ್ಗೆ ಕಲಾವಿದರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವರು ತನಗೂ ಶೋಷಣೆಯಾಗಿದೆ ಎಂದ್ರೆ ಮತ್ತೆ ಕೆಲವರು ಶೋಷಣೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿಯೊಬ್ಬಳು ವಿವಾದಾತ್ಮಕ ಹೇಳಿಕೆ ನೀಡಿದ್ದಾಳೆ.

ಹೇಟ್ ಸ್ಟೋರಿಯಲ್ಲಿ ನಟಿಸಿರುವ ಭೈರವಿ ಗೋಸ್ವಾಮಿ ಶೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ ಮಾಡಿದ್ದಾಳೆ. ಆರಂಭದಲ್ಲಿ ಕೆಲ ನಟಿಯರು ಪುರುಷರ ಜೊತೆ ಮಲಗ್ತಾರೆ. ಇದ್ರಲ್ಲಿ ತಪ್ಪಿಲ್ಲ. 10 ವರ್ಷದ ನಂತ್ರ ನನ್ನ ಮೇಲೆ ಶೋಷಣೆಯಾಗಿದೆ ಎಂದು ಆರೋಪ ಮಾಡ್ತಾರೆಂದು ಭೈರವಿ ಗೋಸ್ವಾಮಿ ಟ್ವಿಟ್ ಮಾಡಿದ್ದಾಳೆ.

ಗೋಸ್ವಾಮಿ ಟ್ವೀಟರ್ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಆರಂಭದಲ್ಲಿಯೇ ನಟಿಯರು ಯಾಕೆ ಶೋಷಣೆಯಾಗಿದೆ ಅಂತಾ ಹೇಳೋದಿಲ್ಲ. 10 ವರ್ಷದ ಬಳಿಕ ಯಾಕೆ ಈ ವಿಷ್ಯ ಹೇಳಬೇಕು? ನಟಿಯರೊಂದೇ ಅಲ್ಲ ಹಲವು ಸಾಮಾನ್ಯ ಮಹಿಳೆಯರು ಕೂಡ ಹಣದ ಆಸೆಗೆ ಶೋಷಣೆ ಹೆಸರನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆಂದು ಟ್ವಿಟ್ ಮಾಡಿದ್ದಾರೆ ಅನೇಕರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...