alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಗೆ ನರ್ಗಿಸ್ ಫಕ್ರಿ ಗುಡ್ ಬೈ..!

nargis_11_0_0

ಬಿಟೌನ್ ಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಬಳುಕುವ ಬಳ್ಳಿ, ಹಾಟ್ ಬೆಡಗಿ ನರ್ಗಿಸ್ ಫಕ್ರಿಯನ್ನು ನಂಬಿ ಸಿನಿಮಾ ಮಾಡ್ತಾ ಇರೋ ನಿರ್ಮಾಪಕರ ಗತಿಯಂತೂ ಅಯ್ಯೋ ಪಾಪ. ಯಾಕಂದ್ರೆ ನಿರ್ಮಾಪಕರನ್ನು ನಡುನೀರಲ್ಲಿ ಕೈಬಿಟ್ಟು ನರ್ಗಿಸ್ ಫಕ್ರಿ ಅಮೆರಿಕಕ್ಕೆ ಹಾರಿದ್ದಾಳೆ. ಅದು ಕೂಡ ಹೇಳದೆ ಕೇಳದೆ.

ತಾನು ನಟಿಸಿದ ‘ಅಜರ್’ ಹಾಗೂ ‘ಹೌಸ್ ಫುಲ್-3’ ಪ್ರಮೋಷನ್ ಗೂ ಆಕೆ ಬಂದಿಲ್ಲ. ಇನ್ನು ನರ್ಗಿಸ್ ಫಕ್ರಿ ನಟಿಸ್ತಾ ಇರೋ ‘ಬಾಂಜೋ’ ಸಿನಿಮಾದ ಚಿತ್ರೀಕರಣ ಕೂಡ ಇನ್ನೂ ಮುಗಿದಿಲ್ಲ. ನ್ಯೂಯಾರ್ಕ್ ನಿಂದ ಬಂದ್ಮೇಲೆ ಡೇಟ್ಸ್ ಹೊಂದಾಣಿಕೆ ಮಾಡ್ಕೊಂಡು ಚಿತ್ರ ಮುಗಿಸ್ಕೊಡ್ತೀನಿ ಅಂದಿದ್ದಾಳಂತೆ ಫಕ್ರಿ. ಆದ್ರೆ ನರ್ಗಿಸ್ ಫಕ್ರಿ ಮತ್ತೆ ಮುಂಬೈಗೆ ವಾಪಸ್ ಬರೋದೇ ಡೌಟು ಅಂತಿದ್ದಾರೆ ಆಕೆಯ ಸ್ನೇಹಿತರು.

ತನ್ನ ವೈಯಕ್ತಿಕ ಬದುಕಿನಲ್ಲಿ ಮನಸ್ಸಿಗೆ ಘಾಸಿಯಾಗುವಂತದ್ದು ನಡೆದಿದೆ. ಅದ್ರಿಂದ ಚೇತರಿಸಿಕೊಳ್ಳೋಕೆ 2-3 ತಿಂಗಳು ಟೈಮ್ ಬೇಕು. ಅದಾದ್ಮೇಲೆ ವಾಪಸ್ ಬಂದು ಒಪ್ಪಿಕೊಂಡ ಚಿತ್ರಗಳನ್ನೆಲ್ಲ ಮುಗಿಸಿಕೊಡ್ತೀನಿ ಅಂದಿದ್ದಾಳಂತೆ ಈ ನಟಿಮಣಿ. ಆದ್ರೆ ಅರ್ಧಂಬರ್ಧ ಸಿನಿಮಾ ಮಾಡಿ ಅದನ್ನು ರಿಲೀಸ್ ಮಾಡೋದ್ಹೇಗಪ್ಪಾ ಅನ್ನೋ ಚಿಂತೆ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ. ನರ್ಗಿಸ್ ಫಕ್ರಿ ಇಷ್ಟೆಲ್ಲ ಬೇಸರಗೊಂಡು ತಾಯ್ನಾಡಿಗೆ ಹೋಗಲು ಕಾರಣ ಉದಯ್ ಚೋಪ್ರಾ ಜೊತೆಗಿನ ಬ್ರೇಕಪ್ ಅನ್ನೋ ಸುದ್ದಿಯೂ ಇದೆ.

ಇವರಿಬ್ಬರ ಮಧ್ಯೆ ಲವ್ವಿಡವ್ವಿ ಶುರುವಾಗಿತ್ತು. ಆದಷ್ಟು ಬೇಗ ಮದ್ವೆ ಆಗೋಣ ಅಂತಾ ಉದಯ್ ಚೋಪ್ರಾ ಪ್ರಪೋಸ್ ಕೂಡ ಮಾಡಿದ್ರು. ಆದ್ರೆ ವೃತ್ತಿ ಬಗ್ಗೆ ಹೆಚ್ಚು ಗಮನಹರಿಸಿದ್ದ ನರ್ಗಿಸ್ ಸದ್ಯ ಬೇಡ ಎಂದಿದ್ದಳಂತೆ. ಈಗ ಆಕೆಗೆ ಮದುವೆಯಾಗೋ ಮನಸ್ಸು. ಆದ್ರೆ ಉದಯ್ ಚೋಪ್ರಾ ಮನಸ್ಸು ಬದಲಾಯಿಸಿದ್ದಾರೆ. ನಮ್ಮಿಬ್ಬರ ಮದ್ವೆ ಸಾಧ್ಯವಿಲ್ಲ ಅಂದ್ಬಿಟ್ಟಿದ್ದಾರಂತೆ. ಇದ್ರಿಂದ ನೊಂದಿರುವ ನರ್ಗಿಸ್ ಫಕ್ರಿ, ಬಾಲಿವುಡ್ ನಿಂದ ಶಾಶ್ವತವಾಗಿ ದೂರವಾಗ್ತಾಳೆ ಅನ್ನೋ ಗುಸುಗುಸು ಕೇಳಿ ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...