alex Certify
ಕನ್ನಡ ದುನಿಯಾ       Mobile App
       

Kannada Duniya

ಲೈಸನ್ಸ್ ಗಾಗಿ ವಯಸ್ಸು ಮರೆಮಾಚಿದ್ಲಾ ನಟಿ..?

soha

ಬಾಲಿವುಡ್ ನಟಿ ಸೋಹಾ ಅಲಿ ಖಾನ್ ಗೆ ಶಸ್ತ್ರಾಸ್ತ್ರ ಪರವಾನಿಗೆ ನೀಡಿರುವ ಬಗ್ಗೆ ತನಿಖೆ ನಡೆಸುವಂತೆ ಹರಿಯಾಣದ ಲೋಕಾಯುಕ್ತರು ಗುರ್ಗಾಂವ್ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಶಸ್ತ್ರಾಸ್ತ್ರ ಪರವಾನಗಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 24ಕ್ಕೆ ಮುಂದಿನ ವಿಚಾರಣಾ ದಿನಾಂಕವನ್ನು ನಿಗದಿ ಮಾಡಿದ್ದಾರೆ.

ಈ ಸಂಬಂಧ ಹರಿಯಾಣದ ಸ್ಕೌಟ್ಸ್ & ಗೈಡ್ಸ್ ಆಯುಕ್ತ ನರೇಶ್ ಕುಮಾರ್ ಕದಿಯನ್ ದೂರು ನೀಡಿದ್ದರು. 1996ರಲ್ಲಿ ಸೋಹಾ ಅಲಿ ಖಾನ್ ಶಸ್ತ್ರಾಸ್ತ್ರ ಪರವಾನಗಿ ಪಡೆದುಕೊಂಡಿದ್ರು. ಆ ಸಮಯದಲ್ಲಿ ಸೋಹಾ ಇನ್ನೂ ಅಪ್ರಾಪ್ತರಾಗಿದ್ದರೂ ಲೈಸನ್ಸ್ ನೀಡಲಾಗಿದೆ ಅಂತಾ ನರೇಶ್ ಕುಮಾರ್ ದೂರು ನೀಡಿದ್ದರು.

ಸೋಹಾ ಅಲಿ ಖಾನ್ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಈ ವೆಪನ್ ಅನ್ನು ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಬಳಸಲಾಗಿತ್ತು. ಈ ಸಂಬಂಧ ಪ್ರಾಥಮಿಕ ತನಿಖೆಗೆ ಲೋಕಾಯುಕ್ತರು ಆದೇಶಿಸಿದ್ದರು. ಮಾರ್ಚ್ 10 ರಂದು ತನಿಖಾ ವರದಿ ಸಲ್ಲಿಸಲಾಗಿತ್ತು. ಇದೀಗ ಹೆಚ್ಚಿನ ತನಿಖೆಗೆ ಲೋಕಾಯುಕ್ತರು ಆದೇಶ ಹೊರಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...